ಹುಬ್ಬಳ್ಳಿ- ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಯೊರ್ವ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯಲ್ಲಿ ಗ್ರಾಮದ ಬಾಲಕ ಪ್ರಶಾಂತ ಬಂಡಿವಡ್ಡರ ಮೃತ ದುರ್ದೈವಿಯಾಗಿದ್ದಾನೆ. ಪ್ರಶಾಂತ ಶಾಲೆಗಳಿಗೆ ರಜೆ ನೀಡಿದ್ದರಿಂದ ಕೂಲಿ ಕೆಲಸಕ್ಕೆ ತೆರಳುತ್ತಿದ್ದ. ಅಂಚಟಗೇರಿ ಗ್ರಾಮದ ಮಂಜುನಾಥ ಹಾನಗಲ್ ಎಂಬುವವರ ಮನೆ ಕಾಮಗಾರಿ ನಡೆಯುತ್ತಿದ್ದ ವೇಳೆಯಲ್ಲಿ ವಿದ್ಯುತ್ ತಗುಲಿ ಸಾವಿಗಿಡಾಗಿದ್ದಾನೆ. ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಪ್ರಶಾಂತ. ನಾಳೆಯಿಂದ ಶಾಲೆ ಆರಂಭವಾಗುತ್ತೆ. ನಾನೂ ಕೂಲಿ ಕೆಲಸ ಬರಲ್ಲ ಎಂದು ಹೇಳಿದ್ದ. ಆದ್ರೆ ನಾಳೆಯಿಂದ ಶಾಲೆಗೆ ತೆರಳಬೇಕಾಗಿದ್ದ ವಿದ್ಯಾರ್ಥಿ ವಿದ್ಯುತ್ ತಗುಲಿ ಸಾವನಪ್ಪಿದ್ದಾನೆ.ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

suddinow
suddinow