ಬೀದರ್- ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಅವಶ್ಯಕತೆ ಬಿದ್ದರೆ ಸರ್ಕಾರ ಎಸ್ಮಾ ಜಾರಿ ಮಾಡಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಈಗಾಗಲೇ ನಾವು ಸಾರಿಗೆ ನೌಕರರಿಗೆ ಕೈ ಮುಗಿದು ಬೇಡಿಕೊಂಡಿದ್ದೆವೆ. ಆದ್ರೆ ಅದಕ್ಕೆ ಅವರು ಒಪ್ಪುತಿಲ್ಲಾ ನೋಡೋಣ, ಸರ್ಕಾರ ಯಾವ ಸಂದರ್ಭದಲ್ಲಿ ಏನ್ ಕ್ರಮತೆಗೆದುಕೊಳ್ಳಬೇಕು ತೆಗೆದುಕೊಳ್ಳತ್ತೆ ಅದು ತೆಗೆದುಕೊಳ್ಳುತ್ತೆ. ಒಂದು ವೇಳೆ ಅವಶಕತೆ ಬಿದ್ದರೇ ಎಸ್ಮಾ ಜಾರಿ ಮಾಡಲಾಗುತ್ತದೆ. 

ಸಿಎಂ ಜೊತೆ ಅಧಿಕಾರಿಗಳು ಸಭೆ ನಡೆಸಿಲಿದ್ದಾರೆ, ನಾನೂ ಅಧಿಕಾರಿಗಳ ಜೊತೆ ನಾನು ಸತತ ಸಂಪರ್ಕದಲ್ಲಿ ಇದ್ದೇನೆ. ಏನಾಗುತ್ತೆ ಕಾದು ನೋಡೋಣ ಎಂದಿದ್ದಾರೆ. ಇನ್ನೂ ಇಷ್ಟೆಲ್ಲಾ ಮನವಿ ಮಾಡಿದ್ರೂ, ಏಸ್ಮಾ ಜಾರಿ ಮಾಡಲಿ ಎಂದು ಪ್ರಜೋದನೆ ಮಾಡುತ್ತಿರಬೇಕು, ಅಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ, ಬೆಳಗ್ಗೆ ಕೈ ಮುಗಿದು ವಿನಂತಿ ಮಾಡಿ ಕೇಳಿಕೊಂಡಿದ್ದೇವೆ, ಹಣಕಾಸಿನ ತೊಂದರೆ ಇದೆ, ಆದಾಯದಲ್ಲಿ‌ ಕುಠಿತ ಇದೆ ಅಂತ ಹೇಳಿದ್ದೇವೆ

ಬೊನಸ್ ತೆಗೆದುಕೊಳ್ಳಲು ಸಮಸ್ಯೆ ಇಲ್ಲ, ನೀವೆ ಬ್ಯಾಲೆನ್ಸ್ ಸೀಟ್ ರೆಡಿ ಮಾಡಿ ಅಂತ, ಅವರ ಆದಾಯದಲ್ಲೇ ಸಂಬಳ ಕೊಡಬೇಕು, ಎಷ್ಟು ಆದಾಯ ಬರುತ್ತೆ ಸಂಬಳ ತೆಗೆದುಕೊಳ್ಳಿ ಎಂದು ಸಹ ನಾವು ಹೇಳಿದ್ದೆವೆ. ಆದರೆ ಅದಕ್ಕೆ ಅವರು ಒಪ್ಪಿಗೆ ನೀಡುತ್ತಿಲ್ಲಾ ಕಾದು ನೋಡಬೇಕು ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎಂದು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply