ವನ್ಯಜೀವಿಗಳ ಹಾವಳಿ-ರೈತರಿಗೆ ನಿತ್ಯ ವನವಾಸ

0

ವಿಜಯನಗರ – ಜನ್ಮ ನೀಡಿರೋ ತಾಯಿ, ಜೀವನ ನೀಡಿರೋ ನಾಡು,ದೇಶ ಕಾಯೋ ಸೈನಿಕ,ಅನ್ನ ನೀಡೋ ರೈತ ಇವರೆಲ್ಲಾ ಪೂಜ್ಯ ನೀಯರು. ಆದ್ರೆ ನಮ್ಮ ಬ್ರಷ್ಠ ರಾಜಕೀಯ ಹಾಗೂ ಬ್ರಷ್ಠ ಅಧಿಕಾರಿಗಳಿರೋ ವ್ಯವಸ್ಥೆಯೊಂದಾಗಿ,ಸರ್ಕಾರದಿಂದ ಅನ್ನದಾತರಿಗೆ ಕೊಂಚಿತ್ತೂ ಗೌರವ ಸಿಗುತ್ತಿಲ್ಲ ಅವರಿಗೆ ನೆಮ್ಮದಿ ಸಿಗುತಿಲ್ಲ.

ಇದಕ್ಕೆ ಸಾಕ್ಷಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ  ಹಗರಿಬೊಮ್ಮನಹಳ್ಳಿ,ಕೂಡ್ಲಿಗಿ, ಸಂಡೂರು ತಾಲೂಕುಗಳಲ್ಲಿನ. ಅರಣ್ಯದಂಚಿನ ಹೊಲಗಳ ಬಹುತೇಕ ರೈತರ ಗೋಳಾಗಿದೆ. ಅರಣ್ಯದಂಚಿನ ಬಹುತೇಕ ಗ್ರಾಮಗಳ ರೈತರು ವನ್ಯ ಜೀವಿಗಳ ಹಾವಳಿಯಿಂದಾಗಿ,ಹಗಲಿರುಳು ಹೊಲದಲ್ಲಿನ ಫಲ ಕಾಯಬೇಕಿದೆ ಅದಕ್ಕಾಗಿ ಅವರು ನಿತ್ಯ ವನವಾಸ ಅನುಭವಿಸುವಂತಾಗಿದೆ,

ಹಗರಿಬೊಮನಹಳ್ಳಿ ತಾಲೂಕು ನಾಣ್ಯಾಪುರ ಗ್ರಾಮದಲ್ಲಿನ  ಬಹುತೇಕ ರೈತರು,ಕತ್ತಲಾದರೆ ಸಾಕು ಮನೆಗೊಬ್ಬರಂತೆ ಬೆತ್ತ ಹಾಗೂ  ಬ್ಯಾಟರಿ ಹಿಡಿದು ಹೊಲಗಳಿಗೆ ತೆರಳುತ್ತಾರೆ. ತಮ್ಮ ಜೀವದ ಹಂಗು ತೊರೆದು ಹೆಂಡರು ಮಕ್ಕಳನ್ನು ಮನೆಯಲ್ಲಿ ಬಿಟ್ಟು, ಅಡವಿಗೆ ಅಂಟಿಕೊಂಡುರುವ ತಮ್ಮ ಹೊಲ ಸೇರುತ್ತಾರೆ

ಕಾರಣ ಬಿತ್ತನೆ ಸಂದರ್ಭದಲ್ಲಿ ಕಾಡುಹಂದಿಗಳು ಹೊಲದಲ್ಲಿ ಬಿತ್ತರುವ ಕಾಳುಗಳನ್ನು ಹೆಕ್ಕಿ ಹೆಕ್ಕಿ ತಿನ್ನುತ್ತವೆ,ಅವುಗಳ ಹಾವಳಿ ತಪ್ಪಿಸಲೆಂದೇ ರೈತರು ರಾತ್ರಿ ಹೊತ್ತಲ್ಲಿ ನಿದ್ದೆಗೆಟ್ಟು ಹೊಲದಲ್ಲಿನ ಬಿತ್ತಿದ ಕಾಳನ್ನು ಕಾಯಬೇಕಿದೆ. ಬೆಳೆ ಬಿತ್ತನೆ ಮಾಡಿದಾಗಿನಿಂದ ಫಸಲು ಕೊಯ್ಲು ಮಾಡಿ ಫಲ ಮನೆ ತಲುಪುವ ವರೆಗೂ ವನ್ಯ ಜೀವಿಗಳಿಂದ ರಕ್ಷಿಸಬೇಕಿದೆ. ಕರಡಿ ಹಾಗೂ ಚಿರತೆ ಕಾಣಿಸಿಕೊಳ್ಳುವ ಅರಣ್ಯದಂಚಿನ ಹೊಲದ ರೈತರು ತಮ್ಮ ಪ್ರಾಣದ ಹಂಗು ತೊರೆದು ತಾವು ಬಿತ್ತಿರುವ ಕಾಳನ್ನು ಕಾಯಬೇಕಿದೆ.

ಇದು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ತಾಲೂಕುಗಳ ಅರಣ್ಯದಂಚಿನಲ್ಲಿರುವ ಗ್ರಾಮಗಳ ರೈತರ ನಿತ್ಯದ ಗೋಳಾಗಿದೆ. ಬಹುತೇಕ ಗ್ರಾಮಗಳ ಹೊಲಗಳಿಗೆ ಅಡವಿ ಹಂದಿಗಳು ಗುಂಪು ಗುಂಪಾಗಿ ಲಗ್ಗೆ ಇಡುತ್ತಿದ್ದು, ಕೆಲವೆಡೆಗಳಲ್ಲಿ ಕರಡಿ,ನವಿಲು, ಗುಬ್ಬಿ,ಪಾರಿವಾಳ ಸೇರಿದಂತೆ ಕೆಲ ಪಕ್ಷಿಗಳು ಹೊಲಗಳಿಗೆ ಲಗ್ಗೆ ಹಾಕಿ ಬೆಳೆ ಹಾಳು ಮಾಡುತ್ತಿವೆ ಎಂದು ರೈತರು ದೂರಿದ್ದಾರೆ.ಕೆಲವೊಮ್ಮೆ ದಾಳಿ ಮಾಡಿದ ಹಂದಿಗಳನ್ನು ಹಿಮ್ಮೆಟ್ಟಲು ಪ್ರಯತ್ನಿಸಿದಾಗ, ಅವುಗಳ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವ ಸಾಕ್ಷಿಗಳೂ ಇವೆ. ಹಾಗೂ ದಾಳಿ ಯಿಂದಾಗಿ ಗಂಭೀರವಾಗಿ ಗಾಯಗೊಂಡು ಅಂಗಹೂನರಾಗಿರುವ ರೈತರೂ ಇದ್ದಾರೆ,ಅವರಿಗೆ ಯಾವುದೇ ಪರಿಹಾರ ನೆರವು ಸಿಕ್ಲಿಲ್ಲ ಬೆಳೆ ಪರಿಹಾರ ಕೇವಲ ಲಕ್ಕ ಪತ್ರಗಳಿಗೇ ಸೀಮಿತವಾಗಿವೆ,ಅದು ರೈತರ ಪಾಲಿಗೆ ಕುಸುಮ..

ಸೈನಿಕರು ಹಗಲಿರುಳು ದೇಶಕಾದರೆ ಇಲ್ಲಿ ರೈತ ಹಗಲಿರುಳು ಜನರ ಅನ್ನವನ್ನ ಕಾಯುತ್ತಿದ್ದಾನೆ,ಆದ್ರೆ ಇವರ ಒಳಿತನ್ನ ಕಾಯ ಬೇಕಿರೋ ಸರ್ಕಾರಗಳು ಇವರ ಒಳಿತನ್ನ ಕಾಯದೇ ಹೊಣೆಗೇಡಿತನ ತೋರುತ್ತಿದೆ.. ನಾಚಿಕೆಯಾಬೇಕಿದೆ ಭ್ರಷ್ಠ ರಾಜಕಾರಣಿಗಳಿಗೆ ಹಾಗೂ ಭ್ರಷ್ಠ ಅಧಿಕಾರಿಗಳಿಗೆ.. ಸರ್ಕಾರ ವನ್ಯ ಜೀವಿಗಳಿಂದ ರಕ್ಷಿಸಲು ಹತ್ತಾರು ಯೋಜನೆಗಳನ್ನ ಜಾರಿಗೆ ತಂದಿದೆ ಯಾದರೂ ಅವೆಲ್ಲಾ ಕೇವಲ ಲೆಕ್ಕ ಪತ್ರಕ್ಕೆ ಸೀಮಿತವಾಗಿವೆ, ಪರಿಹಾರಗಳು ಪಲಾನುಭವಿಗಳಿ ತಲುಪುತಿಲ್ಲವೆಂದು ರೈತ ಮುಖಂಡರು ದೂರಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply