ಮೈಸೂರು – ನಾವು ಎಷ್ಟೆ ಎತ್ತರಕ್ಕೆ ಬೆಳೆದರೂ ನಾವು ಹುಟ್ಟಿದ ಊರು, ಬಾಲ್ಯದ ಸ್ನೇಹಿತರನ್ನು ಮರೆಯಬಾರದು ಎನ್ನುತ್ತಾರೆ. ಹೌದು ಅದೇ ಹಾದಿಯಲ್ಲಿ ಇಂದು ನಡೆಯುವ ಮೂಲಕ ಸ್ನೇಹದ ಮಹತ್ವವನ್ನು ಮತ್ತೊಮ್ಮೆ ನಾಡಿಗೆ ಸಾರಿದ್ದಾರೆ ಮಾಜಿ ಸಿ ಎಮ್ ಸಿದ್ದರಾಮಯ್ಯಾ. ಇಂದು ಮಾಜಿ ಸಿ ಎಮ್ ಸಿದ್ದರಾಮಯ್ಯಾ ಅವರು ತಿ.ನರಸೀಪುರ ತಾಲೂಕಿನ ಕುಪ್ಪೆಗಾಲ ಗ್ರಾಮದ, ತಮ್ಮ ಬಾಲ್ಯ ಸ್ನೇಹಿತನಾದ  ಪುಟ್ಟಸ್ವಾಮಿ ಗೌಡ (75) ಅಂತಿಮ ದರ್ಶನ ಪಡೆದಿದ್ದಾರೆ. ವಯೋ ಸಹಜ ಖಾಯಿಲೆ ಇಂದ ಬಳಲುತಿದ್ದ ಅವರು  ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಈ ವಿಷಯವನ್ನು ಕುಟುಂಬಸ್ಥರು ಸಿದ್ದರಾಮಯ್ಯರಿಗೆ ಮುಟ್ಟಿಸಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ಕುಪ್ಪೆಗಾಲ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ, ಪುಟ್ಟಸ್ವಾಮಿ ಗೌಡರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು

Leave A Reply