ನಾಯಿತನವ ಮಾಣಿಸು

0

ಡಾ. ಈಶ್ವರಾನಂದ ಸ್ವಾಮೀಜಿ

ತುಪ್ಪದ ಸವಿಗೆ ಅಲಗನೆಕ್ಕುವ ಸೊಣಗನಂತೆನ್ನ ಬಾಳುವೆ
ಸಂಸಾರ ಸಂಗವ ಬಿಡದು ನೊಡೆನ್ನ ಮನವು
ಈ ನಾಯಿತನವ ಮಾಣಿಸು ಕೂಡಲ ಸಂಗಮದೇವ ನಿಮ್ಮ ಧರ್ಮ!

ತುಕ್ಕು ಹಿಡಿದ ಕತ್ತಿ ಸ್ವಚ್ಛವಾಗಲೆಂದು ತುಪ್ಪ ಹಚ್ಚಿಟ್ಟರೆ ನಾಯಿಯು ಆ ತುಪ್ಪದ ವಾಸನೆಗೆ ಕತ್ತಿಯನ್ನು ನಾಲಿಗೆಯಿಂದ ನೆಕ್ಕುತಿದ್ದರೆ ಅದರ ನಾಲಿಗೆ ಸೀಳಿ ರಕ್ತ ಹೊರಟರೂ ಅದು ತನ್ನ ನಾಲಿಗೆಯಿಂದಲ್ಲ ಕತ್ತಿಯಿಂದ ಎಂದು ತಿಳಿಯುತ್ತದೆ. ಕತ್ತಿಯಿಂದ ರಕ್ತ ಬರುತಿದೆಂಬ ಭ್ರಾತಿಯಿಂದ ಮತ್ತೆ ಮತ್ತೆ ಆ ಕತ್ತಿಯನ್ನು ನೆಕ್ಕಿ ಭಯಂಕರವಾದ ಹಾನಿಗಿಡಾಗುವದೋ, ಹಾಗೆಯೇ ಈ ಸಂಸಾರದಲ್ಲಿ (ಜಗತ್ತಿನಲ್ಲಿ) ಹೊನ್ನು, ಹೆಣ್ಣು ಮತ್ತು ಮಣ್ಣು ಮೊದಲಾದ ವಿಷಯ ವಸ್ತುಗಳಲ್ಲಿಯೇ ಸುಖವಿದೆಂದು ಭ್ರಮಿಸಿ ಅವುಗಳನ್ನು ಮೋಹಿಸಿ ಅವುಗಳನ್ನು ಅನುಭವಿಸುವಂತ ಮಾನವನು ಅಪಾರ ದುಃಖವನ್ನು ಅನುಭವಿಸುತ್ತಾನೆ ಎಂದು ಬಸವಣ್ಣನವರು ಈ ಮೇಲಿನ ವಚನದಲ್ಲಿ ಹೇಳಿದ್ದಾರೆ.

ಶ್ರೀಮಂತರ ಮನೆಯಲ್ಲಿರುವ ನಾಯಿಗೆ ಹೊತ್ತು ಹೊತ್ತಿಗೆ ಸಿಗುವ ಊಟದಲ್ಲಿ ತೃಪ್ತಿಯಿಲ್ಲ. ಅದು ಮನೆಯಿಂದ ಹೊರಬಿದ್ದು ತನಗೆ ಇಷ್ಟವಾದ ಆಹಾರವನ್ನು ಹುಡುಕಲು ಸುರುಮಾಡಿತು. ದಿನವಿಡಿ ಹುಡುಕಿದರೂ ರಸ್ತೆ ಪಕ್ಕದಲ್ಲಿ ಬಿದ್ದ ಎಂಜಲೆಲೆ ಬೀದಿ ನಾಯಿಗಳ ಜೊತೆಗೆ ಹೋರಾಡಿದರೂ ಸಿಗಲಿಲ್ಲ. ಕೊನೆಗೆ ಒಣಗಿದ ಮೂಳೆಯೊಂದು ಸಿಕ್ಕಾಗ ಬಹಳ ಖುಶಿಯಿಂದ ಅದನ್ನು ಕಡಿಯಲು ಸುರುಮಾಡಿತು. ಕಷ್ಟಪಟ್ಟು ಆ ಮೂಳೆಯನ್ನು ಅಗಿಯಲು ಅದರ ನಾಲಿಗೆಯಿಂದ, ಹಲ್ಲಿನ ದವಡೆಯಿಂದ ರಕ್ತ ಚಿಮ್ಮಿತು. ತನ್ನ ರಕ್ತವನ್ನೇ ಹೀರಿದ ನಾಯಿ ಆ ರಕ್ತ ಮೂಳೆಯಿಂದ ಬರುತಿದೆಂದು ಭಾವಿಸಿ ಆವೇಶದಿಂದ ಕಡಿಯತೊಡಗಿತು.

ದಾರಿಕಾರನೊಬ್ಬ “ಹುಚ್ಚ ನಾಯಿ! ಅದು ಒಣಗಿದ ಮೂಳೆ ತುಂಡು. ನೀನು ಉತ್ಸಾಹದಿಂದ ಹೀರುತ್ತಿರುವ ರಕ್ತ ಮೂಳೆಯದಲ್ಲ. ನಿನ್ನ ಬಾಯಿಂದಲೇ ಬರುತ್ತದೆ.” ಎಂದು ಹೇಳಿದರೂ ಆ ನಾಯಿ ದಾರಿಕಾರನಿಗೆ ನೋಡಿ “ಇಷ್ಟು ದಿನಗಳವರೆಗೂ, ರಕ್ತದ ರುಚಿ ನೊಡಿದಿಲ್ಲ, ಅದು ಇಗ ಈ ಮೂಳೆ ಕಡಿಯುತ್ತಿರುವುದರಿಂದ ನನಗೆ ತೀಳಿಯಿತು. ಆದ್ದರಿಂದ ಈ ರಕ್ತ ಈ ಮೂಳೆಯಿಂದಲೇ ಬರುತ್ತಿದೆ, ನನಗೆ ಮೋಸ ಮಾಡಲು ಸಾಧ್ಯವಿಲ್ಲ.” ಎಂದು ಮತ್ತೆ ಜೋರಾಗಿ ಕಡಿಯತೊಡಗಿತು.

ಆದುದರಿಂದ“ಸಿರಿಯು ಸತಿ ಸುತರೆಲ್ಲ ನಿಜವೆಂದು ನೆರೆನಂಬಿ ಬರಿದೆ ಮೈಮರೆದು ಕೆಡದಿರು ಮಂದ ಮನುಜಾ” ಹೊನ್ನು, ಹೆಣ್ಣು, ಮಣ್ಣು, ಮಕ್ಕಳು ಮರಿಗಳು ನಿಜವೆಂದು ಅರಿದು ಮೋಹಗೊಂಡು ಹಾಳಾಗಬೇಡ. ನೀನಾರೆಂಬುವುದನ್ನು ಅರಿತು ನಡೆಯಂದು ಸರ್ಪಭೂಷಣ ಶಿವಯೋಗಿಗಳು ನುಡಿದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply