ಬಳ್ಳಾರಿ- 2020 ಮಾ.31ರೊಳಗೆ ಖರೀದಿಸಿರುವ  ಬಿಎಸ್-4 ವಾಹನಗಳನ್ನು ಈವರೆಗೆ ನೋಂದಣಿ ಮಾಡದ ಮಾಲೀಕರು 2021 ಜ.01ರಿಂದ 16ರವರೆಗೆ ನೋಂದಣಿ ಮಾಡಿಸಲು ಸಾರಿಗೆ ಇಲಾಖೆ ಕಡೆಯ ಅವಕಾಶವನ್ನು ನೀಡಿದೆ. ಸಾರಿಗೆ ಆಯುಕ್ತರು ಬೆಂಗಳೂರು ಅವರು ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ 2020 ಮಾ.31ರ ಒಳಗಡೆ ಮಾರಾಟವಾಗಿ ಈ ವಾಹನ ಪೋರ್ಟಲ್ ನಲ್ಲಿ ನಮೂದಾಗಿರುವ ಬಿಎಸ್-4 ವಾಹನಗಳ ನೋಂದಣಿ ಮಾಡಿಸಿಕೊಳ್ಳಲು  2021 ಜ.01ರಿಂದ 16ರವರೆಗೆ ಕಡೆಯ ಅವಕಾಶವಿರುತ್ತದೆ. ಆದ ಕಾರಣ ಹೊಸಪೇಟೆ ಕಚೇರಿಯ ವ್ಯಾಪ್ತಿಯ ತಾಲೂಕುಗಳ ಸಾರ್ವಜನಿಕರು ಈ ಪ್ರಯೋಜನೆಯನ್ನು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

About Author

Priya Bot

Leave A Reply