ಬೆಂಗಳೂರು – ಶಾಸಕರ ಗನ್‌ ಮ್ಯಾನ್  ಎಂದು ಹೇಳಿಕೊಂಡು ಏರಿಯಾದಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿದ್ದ ಶಾಸಕರ  ನಕಲಿ ಗನ್‌ ಮ್ಯಾನ್ ಪೊಲೀಸರ ಬಲೆಗೆ ಬಿದಿದ್ದಾನೆ.‌ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ನಕಲಿ ಗನ್‌ ಮ್ಯಾನ್ ನನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸ್ ಬಲೆಗೆ ಬಿದ್ದ ನಕಲಿ ಗನ್‌ ಮ್ಯಾನ್  ನಾರಾಯಣ್ ರಾಮಚಂದ್ರ ಹೆಗಡೆ ಎಂದು ಗುರುತಿಸಲಾಗಿದ್ದು. ಮೂಲತಃ  ಶಿರಸಿ ಮೂಲದ ವ್ಯಕ್ತಿ ಈತ.‌ ಪೇಸ್ ಬುಕ್ ನಲ್ಲಿ ಪರಿಚಯವಾದ  ವ್ಯಕ್ತಿಗೆ ಕೆಲಸ ಕೊಡಿಸುವುದಾಗಿ ಹೇಳಿ ಆತನಿಂದ ಹಣ ಪಡೆದು ಆತನನ್ನು ಬೆಂಗಳೂರಗೆ‌ ಕರೆತಂದಾಗ ಪೊಲೀಸ್ ಬಲೆಗೆ ಬಿದಿದ್ದಾನೆ.

ನಕಲಿ ಗನ್ ಇಟ್ಟುಕೊಂಡು ನಾನು ಧಾರವಾಡ ಎಮ್ ಎಲ್ ಎ ಗನ್ ಮ್ಯಾನ್ ಎಂದು ಹೇಳಿಕೊಂಡು ಓಡಾಡುತ್ತಿದ್ದ .‌ ಶಾಸಕರ ಗನ್‌ಮ್ಯಾನ್ ಎಂದು ಹೇಳಿಕೊಂಡು ಗನ್‌ ಮ್ಯಾನ್ ಹಾಗೇ ಡ್ರೇಸ್ ಮಾಡಿಕೊಂಡು ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಕಲಿ ಗನ್‌ ಮ್ಯಾನ್ ಈಗ ಅಸಲಿ ಪೊಲೀಸರು ಅಥಿತಿ ಆಗಿದ್ದಾನೆ. ಈ ಸಂಭಂದ ಉಪ್ಪರ ಪೇಟೆ ಪೊಲೀಸ್ ಠಾಣೆಯುಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣ ಮುಂದು ವರೆಸಿದ್ದಾರ….

About Author

Priya Bot

Leave A Reply