ರಾಯಚೂರು – ರೈತರು ಭತ್ತ ಖರೀದಿ ಕೇಂದ್ರಕ್ಕೆ ಭತ್ತವನ್ನು ತಂದರೆ, ಗುಣಮಟ್ಟ ಸರಿಯಿಲ್ಲ ಎಂದು ವಾಪಸ್ ಕಳುಹಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಆನ್ ಲೈನ್ ನಲ್ಲಿ ನೋಂದಾಯಿಸಿದ ರೈತರು, ಭತ್ತದ ಕಟಾವು ಮುಗಿದಿದ್ದು’ ಅಕಾಲಿ ಮಳೆಯಿಂದ ಕಂಗಾಲಾಗಿ, ಸರಕಾರದ ಖರೀದಿ ಕೇಂದ್ರಕ್ಕೆ ತಮ್ಮ ಭತ್ತವನ್ನು ತಂದರೆ. ಅವುಗಳನ್ನು ಕೈಯಿಂದ ಉಜ್ಜಿ ಗುಣಮಟ್ಟವನ್ನು ಪರೀಕ್ಷೆ ಮಾಡಿ ನಿಮ್ಮ ಭತ್ತ ಸರಿಯಿಲ್ಲ ಎಂದು ನಿನ್ನೆ ಒಂದೇ ದಿನ ೫೦ ಕ್ಕೂ ಹೆಚ್ಚಿನ ರೈತರು ಭತ್ತವನ್ನು ವಾಪಸ್ ಕಳಿಸಿದ್ದಾರೆ.

ಇಂದು ಕೂಡ ಚಂದ್ರಬಂಡ, ಗಿಲ್ಲೆಸೂಗೂರು ವಲಯದಿಂದ ಬಂದಂತಹ ಭತ್ತವನ್ನು ಖರೀದಿಸದೆ ವಾಪಸ್ ಕಳಿಸುತ್ತಿದ್ದಾರೆ. ಈಗಾಲೇ ಕೊರೋನಾ ಎಂಬ ಮಹಾಮಾರಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ಇದರ ಜೊತೆಯಲ್ಲಿ ಅಕಾಲಿಕ ಮಳೆಯೂ ಉಂಟಾಗುತ್ತಿದ್ದು ಹೊಲದಲ್ಲಿ ಸಂಗ್ರಹಿಸಿಡಲು ತೊಂದರೆ ಅನುಭವಿಸುತ್ತಿದ್ದಾರೆ. ಕೈಯಿಂದ ಉಜ್ಜಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸದೆ, ತಾಂತ್ರಿಕ ವಿಧಾನದಿಂದ ಪರೀಕ್ಷೆ ಮಾಡಬೇಕು ಎಂದು ರೈತರು ತಿಳಿಸಿದರು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭತ್ತವನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಸುರಿದು ಪ್ರತಿಭಟನೆ ಮಾಡುವದಾಗಿ ಆಗ್ರಹ ವ್ಯಕ್ತಪಡಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply