ಕಾಡು ಹಂದಿಗಳ ಕಾಟಕ್ಕೆ ರೋಸಿಹೋದ ರೈತರು

0

ಕೊಟ್ಟೂರು: ಈ ವರ್ಷದ ಮೊದಲ ಹಂತದ ಮುಂಗಾರು ಮಳೆ ಸಮೃದ್ಧವಾಗಿದ್ದು ರೈತರು ಕಷ್ಟಪಟ್ಟು ಹೊಲಗಳಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೀಜಗಳಿಗೆ ಕಾಡು ಹಂದಿಗಳು ಹಾನಿ ಮಾಡಿದ್ದು, ಹಲವು ಗ್ರಾಮಗಳ ರೈತರಲ್ಲಿ ಆತಂಕ ಮೂಡಿಸಿವೆ.

ತಾಲೂಕಿ ನಮಲ್ಲನಾಯಕನಹಳ್ಳಿ, ಉಜ್ಜಿನಿ, ಮಂಗಾಪುರ ಗ್ರಾಮದ ರೈತರು ಸಾವಿರಾರು ರೂಪಾಯಿ ಸಾಲ ಮಾಡಿ ಬೀಜ ಗೊಬ್ಬರಗಳನ್ನು ಖರೀದಿಸಿ ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದ ಇವರಗಳ ಆಸೆ ಕೋರೊನಾ ವೈರಸ್ ನಂತೆ ಬ ಕಾಡು ಹಂದಿಗಳ ಗುಂಪು ಬಿತ್ತನೆ ಮಾಡಿ ಹೊಲಗಳನ್ನು ನಾಶ ಪಡೆದ ಇಸುತ್ತೀವೆಂದು ರೈತರು ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ಹೇಳಿಕೊಂಡಿದ್ದಾರೆ.

ಕೆಲವೊಮ್ಮೆ ಹೊಲಗಳಲ್ಲಿ ಹಗಲು-ರಾತ್ರಿ ಸಮಯದಲ್ಲಿ ಹಂದಿಗಳು ಹಿಂಡು ಹಿಂಡಾಗಿ ದಾಳಿ ಮಾಡಿ, ಹೊಲವನ್ನು ಅಗೆದು ತಿಂದಿವೆ,
ಬಿತ್ತನೆ ಮಾಡಿದ ದಿನದಿಂದ ಅಕ್ಕ ಪಕ್ಕದ ರೈತರೊಂದಿಗೆ ಹೊಲಕ್ಕೆ ಹೋಗಿ, ಹಗಲು ರಾತ್ರಿಯಲ್ಲಿ ಪಾಳಿಯಾಗಿ ಹಂದಿಗಳನ್ನು ಕಾಯುತ್ತೇವೆ.
ಆದರೂ, ಯಾವುದೋ ಸಮಯದಲ್ಲಿ ಹಂದಿಗಳು ಹೊಂಚುಹಾಕಿ ಹೊಲವನ್ನು ಕೆದಕಿ, ಒಂದು ಕಾಳನ್ನೂ ಬಿಡದೆ ತಿಂದು ಹಾಕುತ್ತಿವೆ ಎಂದು ರೈತರಾದ ಸಿ.ಕರಿಬಸವರಾಜ್, ಚನ್ನಬಸಪ್ಪ, ಚೌಡಪ್ಪ ಶಾಂತಮ್ಮ ಬೇಸರ ವ್ಯಕ್ತಪಡಿಸಿದರು.

ಹೊಲವನ್ನು ಹದಗೊಳಿಸಲು ಟ್ಯಾಕ್ಟರ್, ಬಿತ್ತನೆ ಬೀಜ, ಗೊಬ್ಬರ, ಬಿತ್ತನೆ ಕೂಲಿಗಾಗಿ (ಗಳೆವುಗಳ ಬಾಡಿಗೆ ) ಸೇರಿ ಎಕರೆಗೆ ₹10 ಸಾವಿರದಿಂದ ₹12 ಸಾವಿರ ಖರ್ಚು ಮಾಡಿದ್ದೇವೆ. ಮತ್ತೆ ಸಾಲ ಮಾಡಿ ಬಿತ್ತನೆ ಮಾಡುವುದು ಅನಿವಾರ್ಯವಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ನೆರವು ನೀಡಿ, ಹಂದಿಗಳ ಹಾವಳಿಯನ್ನು ತಪ್ಪಿಸಬೇಕು’ ಎಂದು ರವಿ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

IMG-20210617-WA0035.jpg

Email

Huligesh Tegginakeri

About Author

Huligesh Tegginakeri

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಕಳೆದ ಎಂಟು ವರ್ಷಗಳ ಕಾಲ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದೇನೆ.. ವಿಶೇಷ, ವಿಭಿನ್ನ ರೀತಿಯ ಸುದ್ದಿಗಳನ್ನು ಕಲೆಹಾಕಿ ಬರೆಯುವುದೇ ನನ್ನ ಹವ್ಯಾಸ..

Leave A Reply