ಠಾಣೆ ಪಿಎಸ್ಐ ನಿಂದ ಮಾರಣಾಂತಿಕ ಹಲ್ಲೆ

0

ಹುಬ್ಬಳ್ಳಿ-  ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಹಲವು ಬಾರಿ ಹೇಳಿದರೂ, ಹೊಸದಾಗಿ ಡ್ಯೂಟಿಗೆ ಸೇರಿಕೊಂಡಿರುವ ಪಿಎಸ್ಐಗಳು ಸಿನೇಮಾದ ಸಿಂಗಂ ಆಗಲು ಹೊರಟಿರುವ ಘಟನೆಯೊಂದು ಹಳೇಹುಬ್ಬಳ್ಳಿ ಗುಡಿಹಾಳ ಕ್ರಾಸ್ ಬಳಿಯಲ್ಲಿ ನಡೆದಿದೆ.

ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುಖಾನಂದ ಶಿಂಧೆ ಎಂಬುವವರೇ, ರೆಹಮುತ್ತಲ್ಲಾ ಎಂಬಾತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದು, ತೀವ್ರವಾದ ರಕ್ತಸ್ರಾವವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪೊಲೀಸ್ ಕಮೀಷನರ್ ಸಾಕಷ್ಟು ಬಾರಿ ಯಾವುದೇ ಕಾರಣಕ್ಕೂ ಹೊಡೆಯಬಾರದೆಂದು ಹೇಳಿಕೆ ನೀಡಿದ್ದರೂ, ಬಡಿಗೆಯಿಂದ ಹೊಡೆದಿರುವ ಪಿಎಸ್ಐ, ಅಮಾನವೀಯವಾಗಿ ವರ್ತನೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply