ಕೊಪ್ಪಳ- ಕಳೆದ ಒಂದು ತಿಂಗಳಿಂದ ಉಪಟಳ ಇಟ್ಟಿದ್ದ ನರ ಭಕ್ಷಕ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೇಗುಂದಿ ಬಳಿ ನಿನ್ನೆ ತಡರಾತ್ರಿ ಚಿರತೆ ಬಲೆಗೆ ಬಿದ್ದಿದೆ. ಕಳೆದ ಒಂದು ತಿಂಗಳಿಂದ ಒಬ್ಬರ ಪ್ರಾಣ ಬಲಿ ಪಡೆದಿದ್ದ ಚಿರತೆ ಇದಾಗಿದ್ದು, ಕಳೆದ ಎರಡು ವಾರಗಳಿಂದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರ ಸಾಹಸ ಪಟ್ಟಿದ್ರು. ಕಳೆದ ಮೂರು ದಿನಗಳಿಂದ ಚಿರತೆ ಹಿಡಿಯಲು ಬೋನು ಹಾಕಿ ಕಾದು ಕುಳಿತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಕೊನೆಗೆ ಚಿರತೆ ಹಿಡಿದಿದ್ದಾರೆ. ಕಳೆದ ರಾತ್ರಿ ಸುಮಾರು ಮೂರ ಘಂಟೆಯ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿದೆ. ಗಂಗಾವತಿ ತಾಲೂಕಿನ ಯುವಕನನ್ನು ಕೊಂದಿದ್ದ ಚಿರತೆ ಇದಾಗಿದ್ದು, ಚಿರತೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಕೋಂಬಿಂಗ್ ಕಾರ್ಯಾಚರಣೆ ಕೂಡಾ ನಡೆಸಿದ್ದರು. ಆದ್ರೆ ಕೋಂಬಿಂಗ್ ಕಾರ್ಯಾಚರಣೆ ವಿಫಲವಾದ ಬಳಿಕ ಚಿರತೆ ಬಲೆಗಾಗಿ ಬೋನ್ ಇಡಲಾಗಿತ್ತು. ಹೀಗಾಗಿ ಕಳೆದ ರಾತ್ರಿ ಚಿರತೆ ಸೆರೆ ಸಿಕ್ಕಿದ್ದು, ಜನರು ನಿಟ್ಟುಸಿರು ಬಿಟಿದ್ದಾರೆ..