ಲೇಖನ ಡಾ. ಈಶ್ವರಾನಂದ ಸ್ವಾಮೀಜಿ

ಒಮ್ಮೆ ರಾಜನು ಮಂತ್ರಿ, ಸೈನಿಕ ಮತ್ತು ಸೇವಕರ ಜೊತೆಗೂಡಿ ಬೆಟೆಯಾಡಲು ಅರಣ್ಯಕ್ಕೆ ಹೋದನು. ಬೆಟೆಯಲ್ಲಿ ಮೈಮರೆತು ಒಬ್ಬರಿಗೊಬ್ಬರು ತಪ್ಪಿಸಿಕೊಂಡರು. ಸಮಯವಾಗುತ್ತ ಬಂದಾಗ ಜೊತೆಗಾರರ ಅರಿವು ಬಂದು ಹುಡುಕಲು ಹೊರಟರು. ಅದೇ ಅರಣ್ಯದಲ್ಲಿ ಋಷಿಯೊಬ್ಬ ವಾಸವಾಗಿದ್ದನು. ನಾಲ್ವರಲ್ಲೊಬ್ಬ ಆ ಋಷಿ ಹತ್ತಿರ ಬಂದು “ಕುರುಡನೆ ಈ ಕಡೆ ಯರಾದರೂ ಹೋಗಿದ್ದಾರೇನು ?” ಎಂದು ಪ್ರಶ್ನಿಸಿ, ಇವನು ಕುರುಡನು ಹೇಗೆ ನೋಡುತ್ತಾನೆಂದು ತಿಳಿದು ಮುಂದಕ್ಕೆ ಹೊರಟು ಹೋದನು. ಎರಡನೆಯವನು ಬಂದು “ ಹೇ ಕುರುಡ ಸಂನ್ಯಾಸಿಯೇ ಇಲ್ಲಂದ ಯಾರಾದರೂ ವ್ಯಕ್ತಿ ಹೋಗಿದ್ದರೇನು ?” ಎಂದು ಕೇಳಿ ಮೊದಲಿನವನಂತೆ ತಿಳಿದು ಹೊರಟು ಹೋದನು. ಮೂರನೆಯವನು “ಹೇ ಋಷಿಯೇ ಇಲ್ಲಿಂದ ಯಾರಾದರೂ ವ್ಯಕ್ತಿಗಳು ಹೋಗಿದ್ದಾರೆಯೇ ?” ಎಂದು ಕೇಳಿ ಹೊರಟು ಹೋದನು. ನಾಲ್ಕನೆಯವನು ಬಂದು ಅದೇ ಋಷಿಯನ್ನು ಕುರಿತು “ ಪೂಜ್ಯ ಮಹರ್ಷಿಗಳವರೇ ತಮಗೆ ಅನಂತ ನಮಸ್ಕಾರಗಳು” ಎಂದಾಗ ಈ ರಾಜ್ಯದ ರಾಜರಲ್ಲವೆ ತಾವು ? ಎಂದನು. ಆಗ ರಾಜನು ಅದು ಹೇಗೆ ಗೊತ್ತಾಯ್ತು ಪೂಜ್ಯರೆ ? ತಾವು ಹುಟ್ಟು ಕುರುಡರು ಎಂದಾಗ, ತಮ್ಮ ಮಾತಿನಿಂದ ಎಂದ ಋಷಿ. ಈ ಮೊದಲು ತಮ್ಮಂತೆ ಕೇಳಿ ಇಲ್ಲಿಂದ ಈ ಕಡೆಗೆ ಸೇವಕ, ಸೈನಿಕ, ಮಂತ್ರಿಗಳು ಹೋಗಿದ್ದಾರೆ. ಎಂದು ನುಡಿದ ಋಷಿಗಳ ಆಶೀರ್ವಾದ ಪಡೆದ ರಾಜನು ಎಲ್ಲರ ಜೊತೆಗೂಡಿ ಅರಮನೆ ಸೇರಿದನು.

ಮಾತಿನಿಂದಲೇ ವ್ಯಕ್ತಿಯ ವ್ಯಕ್ತಿತ್ವನ್ನು ಅಳೆಬಹುದು. ಉತ್ತಮ ನುಡಿಯು ತೀರ್ಥ ಸ್ವರೂಪವಾಗಿರುತ್ತದೆ. ಅಂಥ ನುಡಿಯಂತೆ ನಡೆಯಿದ್ದರೆ ಅದು ಸಹ ತೀರ್ಥವಾಗುತ್ತದೆ. ತೀರ್ಥಸ್ವರೂಪವಾದ ಪುಣ್ಯಕ್ಷೇತ್ರಗಳ ದರ್ಶನ, ಅಲ್ಲಿರುವ ನೀರನ್ನು ತೀರ್ಥವೆಂದು ಸೇವಿಸುವುದಾಗಲಿ, ಸ್ನಾನ ಮಡುವುದಾಗಲಿ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ಕಳೆದು ಪುಣ್ಯ ಲಭಿಸುತ್ತದೆ. ಅದರಿಂದ ಮುಕ್ತಿ ಹೊಂದುವೇವು ಎನ್ನುವುದು ಹುಸಿ ಮಾತಾಗಿದೆ. ನಿಜವದ ತೀರ್ಥ ಯಾವುದು ಎನ್ನುವುದನ್ನು ದೇವರ ದಾಸಿಮಯ್ಯನವರು ತಮ್ಮ ವಚನದಲ್ಲಿ ವ್ಯಕ್ತಪಡೆಸಿದ್ದಾರೆ. ಸತ್ಯವಂತರ ನುಡಿಯೇ ತೀರ್ಥ. ಅವರ ಮಾರ್ಗದರ್ಶನದಂತೆ ನಡೆ ಉಳ್ಳವನಾಗಿ, ಅಧ್ಯಾತ್ಮ ಚಿಂತನೆ ಗೈಯುತ್ತಿದ್ದರೆ ಅದುವೇ ತೀರ್ಥ. ಹರಿವ ನದಿ ಎಂದಿಗೂ ತೀರ್ಥವಲ್ಲ. ಜನಮನದಲ್ಲಿ ಹುದುಗಿದ ಅಜ್ಞಾನ, ಮೂಡನಂಬಿಕೆಯನ್ನು ಸತ್ಯದ ಮೂಲಕ ಕಳೆದುಕೊಂಡು ಮುಕ್ತಾತ್ಮರಾಗಿರಿ ಎಂದು ಉಪದೇಶಿಸಿದ್ದಾರೆ.

ಸತ್ಯದ ನುಡಿ ತೀರ್ಥ, ಭಕ್ತಿಯ ನಡೆ ತೀರ್ಥ
ಮುಕ್ತಿಯ ಪ್ರಸಂಗ ಉಳ್ಳಡೆ ತೀರ್ಥ,
ಹರಿವ ನದಿ ಎತ್ತಣಾ ತೀರ್ಥ ? ರಾಮನಾಥ.

ದಾಸಿಮಯ್ಯನವರ ಹೇಳಿಕೆಯು ತಪ್ಪಗಿದ್ದರೆ ನೀರಿನಲ್ಲಿ ಅನೇಕ ಜಲಚರ ಜೀವಿಗಳಿದ್ದು ಅವು ತಮ್ಮ ಸ್ವರೂಪ ಜ್ಞಾನ ಮಾಡಿಕೊಂಡು ಮೋಕ್ಷ ಪಡುಯಬೇಕಿತ್ತು. ಆದರೆ ಅದು ಎಂದಿಗೂ ಸಾಧ್ಯವಿಲ್ಲವೆಂದು ಅರಿತ ದಾಸಿಮಯ್ಯನವರು ಆತ್ಮಜ್ಞಾನಕ್ಕೆ ಬೇಕಾದ ನುಡಿಗಳು ತೀರ್ಥ, ಅದರಿಂದಲೇ ಮೋಕ್ಷ ದೊರೆಯುವುದೆಂದಿದ್ದಾರೆ. ಇವರ ಪ್ರಭಾವಕ್ಕೆ ಒಳಗಾದ ಸರ್ವಜ್ಞ ಕವಿಗಳು ಸಹ ಹೀಗೆ ಹೇಳಿದ್ದಾರೆ.-
ಹಲವು ಪಪಗಳ ಮಾಡಿ
ಹರಿಯುವ ಗಂಗೆಯಲ್ಲಿ ಮಿಂದರೆ |
ಹರಿದು ಹೋಗಲು ಎರೆಯ ಮಣ್ಣಲ್ಲ ಸರ್ವಜ್ಞ ||

ಅಜ್ಞಾನ, ಮೂಡನಂಬಿಕೆಗಳು ಶರೀರಕ್ಕಂಟಿದ ವಸ್ತುಗಳಲ್ಲ. ಅವು ಮನಸ್ಸಿಗೆ ಅಂಟಿರುವ ಕಲ್ಮಷಗಳಾಗಿವೆ. ಅವುಗಳನ್ನು ತೊಳೆದು ಕೊಳ್ಳಲು, ಗಂಗಾಜಲಕ್ಕಿಂತ ಶ್ರೇಷ್ಠವಾದ ಸಾಧು, ಸಂತರ, ಮಹಾತ್ಮರ, ಸತ್ಪುರುಷರ, ಗುರುಗಳ ನುಡಿಗಳು ಅವಶ್ಯಕತೆ ಇರುವುದನ್ನು ಹಾಗೂ ಅದರಿಂದಲೇ ತೀರ್ಥ ಸ್ವರೂಪವಾದ ಮೋಕ್ಷ ದೊರೆಯುವುದು ಎಂಬುದು ಸರ್ವಜ್ಞನವರ ವಚನದ ಅಂತರಾರ್ಥವಾಗಿದೆ.

About Author

Priya Bot

Leave A Reply