ಅಲೆಮಾರಿಗಳಿಗೆ ಆಸರೆಯಾದ ಅನ್ನದಾತರು.

0

ಹುಬ್ಬಳ್ಳಿ-ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಲಯನ್ಸ್ ಕ್ಲಬ್ ಹುಬ್ಬಳ್ಳಿ  ಪರಿವಾರ್ ವತಿಯಿಂದ ಇಂದು ಅಲೆಮಾರಿ ಜನಾಂಗದವರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.ರಾಮ ಲಕ್ಷ್ಮಣ ಸೀತಾ ಆಂಜನೇಯ ಹಾಗೂ ಇನ್ನಿತರ ವೇಷಭೂಷಣಗಳನ್ನು ಧರಿಸಿ ಎಲ್ಲ ಕಡೆಯೂ ತಿರುಗಾಡಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಈ ಜನಾಂಗ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ  ಇಂತಹ ಜನಾಂಗವನ್ನು ಗುರುತಿಸಿ ಅವರ ಕಷ್ಟಗಳನ್ನು ಅರಿತು ಸಹಾಯ ನೀಡಿದ ಲಯನ್ಸ್ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರ ಅಭಿನಂದನಾರ್ಹ.

ಈ ಸಮಾಜದ ಕಡು ಬಡವರಿಗೆ ಆಹಾರದ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಯಿತು. ಸಂದರ್ಭದಲ್ಲಿ   ಲಯನ್ಸ್ ಕ್ಲಬ್ ಹುಬ್ಬಳ್ಳಿ ಪರಿವಾರದ ಸಂಸ್ಥಾಪಕ ಅಧ್ಯಕ್ಷರಾದ ಮಹೇಂದ್ರ ಸಿಂಘಿ,ಅಧ್ಯಕ್ಷರಾದ ಬೀರ್ಬಲ್ ಬಿಷ್ಣೋಯಿ ಕಾರ್ಯದರ್ಶಿ ಸಂಜಯ ಗಣೇಶ್ಕರ,ಖಜಾಂಚಿಗಳಾದ ಪಿಂಟು ಸಂಘ್ವಿ,ಉಪಾಧ್ಯಕ್ಷರಾದ ಗೌತಮ ಗೊಲೇಚಾ,ಸೇವಾ ಮೋಹನ್ ಸುತಾರ್ ,ದಿಲೀಪ್ ತಲಿಸರಾ,ಮನೋಜ್ ಬಲಗತ,ಗೌತಮ್ ಬಾಫಣಾ ,ದಿಲೀಪ್ ಮುನೋತ್ ಕಾಂತಿಲಾಲ್ ಫಾಲ್ಗೋತಾ, ಜಿ.ಜಿ ದ್ಯಾವನಗೌಡ್ರ ಶಂಕರಗೌಡ ಭರಮಗೌಡ್ರ ಅದರಗುಂಚಿ ರಾಮನಗೌಡ  ದ್ಯಾವನಗೌಡ್ರ  ಗ್ರಾಮಪಂಚಾಯತ ಸದಸ್ಯ ಉಮೇಶ್ ಚಿಕ್ಕನಗೌಡ್ರ  ಶಿವನಗೌಡ   ದ್ಯಾವನಗೌಡ್ರ  ಬಸು ಒಣರೊಟ್ಟಿ ಸೇರಿದಂತೆ  ಅದರಗುಂಚಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply