ಹುಬ್ಬಳ್ಳಿ- ಗುಣಮಟ್ಟಕ್ಕೆ ಹೆಸರುವಾಸಿಯಾದ ಡಿ ಎಸ್ ತೋಮರ್ ಕ್ಯಾಟರ್ಸ್  ಅವರ ಮತ್ತೊಂದು ಶಾಖೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇಂದು ಉದ್ಘಾಟಿಸಿದ್ದಾರೆ . ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ  ಆರಂಭವಾದ ಫುಡ್ ಇನ್ ರೆಸ್ಟೋರೆಂಟ್ ಗೆ ರಿಬ್ಬನ್ ಕಟ್ ಮಾಡುವ ಮೂಲಕ ವಿದ್ಯುಕ್ತವಾಗಿ ಸಚಿವರು ಚಾಲನೆ ನೀಡಿದ್ರು. ಹುಬ್ಬಳ್ಳಿಯ  ರೇಲ್ವೆ ನಿಲ್ದಾಣದಲ್ಲಿ “ಫುಡ್ ಇನ್” ಹೆಸರಿನ ವೆಜ್ ಮತ್ತು ನಾನ್ ವೆಜ್ ರಿಫ್ರೆಶ್ಮೆಂಟ್ ಸೆಂಟರ್ ಇಂದಿನಿಂದ ಕಾರ್ಯಾರಂಭ ಮಾಡಿದೆ.  ಗ್ರಾಹಕರ ಅನೂಕುಲಕ್ಕೆ ತಕ್ಕಂತೆ ಇಲ್ಲಿ ಹೋಟೆಲ್ ವಿನ್ಯಾಸ್ ಗೊಳಿಸಿದ್ದು, ಪ್ರಾಯಣಿಕರು  ರುಚಿಯಾದ ಊಟವನ್ನು ಇಲ್ಲಿ ಸವಿಯಬಹುದಾಗಿದೆ. ಇದೇ ವೇಳೆಯಲ್ಲಿ ಕೇಂದ್ರ ಸಚಿವ ಜೋಶಿ ಅವರು ಹೋಟಲ್ ನಲ್ಲಿ ಕೆಲ ರುಚಿಕರ ಆಹಾರ ಸೇವಿಸಿದ್ದಾರೆ. ಕೇಂದ್ರ ಸಚಿವ ಜೋಶಿ ಅವರಿಗೆ ಶಾಸಕ ಮುನೆಂಕೋಪ್ಪ ರೈಲ್ವೆ ಜಿಎಂ ಎ ಕೆ ಸಿಂಗ್, ಅರವಿಂದ್, ದಿನೇಶ್ಸಿಂಗ್ ತೋಮರ್, ಉಮೇಶ್ ದುಶಿ, ಇಸ್ರರುದ್ದೀನ್ ಮಂಗಳೂರು, ಡಾ ಎಂ.ನಾಗರಾಜ್ ಉಪಸ್ಥಿತರಿದ್ದರು.

Leave A Reply