ಬಳ್ಳಾರಿ- ಇಂದು ಹೊಸಪೇಟೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಹೆಚ್ ಹನುಮಂತಪ್ಪ ನೇತೃತ್ವದಲ್ಲಿ ಅನಂತಶಯಗುಡಿ, ಎಂಪಿ ಪ್ರಕಾಶ್ ನಗರ ಡಾ.ಬಿ.ಆರ್. ಅಂಬೇಡ್ಕರ್ ಕಾಲೋನಿ ಸೇರಿದಂತೆ ಇತರ ನಗರಗಳಲ್ಲಿ ಮನೆ ಮನೆಗೂ ಭೇಟಿ ನೀಡಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕುರಿತಂತೆ ಸಾರ್ವಜನಿಕರಿಗೆ ತಿಳಿಸಿ ನಿಧಿ ಸಂಗ್ರಹಿಸಲಾಯಿತು.

ಈ ವೇಳೆ ವಿಜಯನಗರ ಉಡಾ ಮಾಜಿ ಅಧ್ಯಕ್ಷರಾದ ಶ್ರೀ ಅಯ್ಯಳ ತಿಮ್ಮಪ್ಪ ವಿಜಯನಗರ ಬಿಜೆಪಿ ಎಸ್ಸಿ  ಮೋರ್ಚಾ ಮಂಡಲ ಅಧ್ಯಕ್ಷರಾದ ಶ್ರೀ ಜಿಬಿ ರಘು, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಮಲ್ಲಪ್ಪ ಹಾಗೂ ಮಹಿಳಾ ಮೋರ್ಚಾ, ಯುವ ಮೋರ್ಚಾ ಸದಸ್ಯರು ಹಾಗೂ ಇತರ ಕಾರ್ಯಕರ್ತರು ಇದ್ದರು.

About Author

Priya Bot

Leave A Reply