ಹುಬ್ಬಳ್ಳಿ:- ಪಾಸ್ಟ್ ಪುಡ್ ನಲ್ಲಿ ಬಳಸುವ ಟೆಸ್ಟಿಂಗ್ ಪೌಡರ್ ವಿಷಕಾರಿ ಪದಾರ್ಥವಾಗಿದ್ದು ಈ ಪದಾರ್ಥಗಳನ್ನು ನಿಷೇದ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಇದೇ ತಿಂಗಳು 25 ಕ್ಕೆ ಒಂದು ದಿನ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಕಾರ ಫೌಂಡೇಶನ್ ಅಧ್ಯಕ್ಷ  ಆರ್ ಲಕ್ಷ್ಮಣ್ ಹೇಳಿದರು ‌

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ತಿಂಗಳಿನಿಂದ ರಾಜ್ಯ ಹಾಗೂ ಜಿಲ್ಲೆಯಲ್ಲಿ ಆಹಾರದಲ್ಲಿ ಬಳಸಲಾಗುತ್ತಿರುವ ಟೆಸ್ಟಿಂಗ್ ಪೌಡರ್( ಅಜಿನೋ ಮೋಟೊ) ವಿಷಕಾರಿ ಪದಾರ್ಥದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದು, ಅದರಂತೆ ಹಲವಾರು ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 50 ಕ್ಕೂ ಹೆಚ್ಚು ಟೆಸ್ಟಿಂಗ್ ಪೌಡರ್ ವಶಕ್ಕೆ ತೆಗೆದುಕೊಂಡು ನಾಶ ಮಾಡಿದ್ದವೆ,ಎಂದರು, ಆದ್ದರಿಂದ ರಾಜ್ಯ ಸರಕಾರ ಟೆಸ್ಟಿಂಗ್ ಪೌಡರ್ ಸಂಪೂರ್ಣವಾಗಿ ರಾಜ್ಯದಲ್ಲಿ ನಿಷೇಧ ಮಾಡಿ ಮುಂದೆ ಆಗಬೇಕಾದ ಬಾರಿ ಅನಾಹುತ ತಪ್ಪಿಸಬೇಕು, ಟೆಸ್ಟಿಂಗ್ ಪೌಡರ್ ನಿಂದ ಕ್ಯಾನ್ಸರ್, ಆ್ಯಸಿಡಿಟಿ, ಹಲವಾರು ರೋಗಗಳು ಬರುತ್ತವೆ,ಇದಕ್ಕಾಗಿ ನಮ್ಮ ಸಂಸ್ಥೆಯಿಂದ 31 ಜಿಲ್ಲೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತೆ ಎಂದರು..

 

 

About Author

Priya Bot

Leave A Reply