ಬಳ್ಳಾರಿ– ಬಳ್ಳಾರಿ ನಗರದ ಸಂಗಮ್ (ಇಂದಿರಾ) ವೃತ್ತದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 12 ಲಕ್ಷ ರೂ. ವೆಚ್ಚದ 20 ಮೀಟರ್ ಎತ್ತರದ ಹೈ ಮಾಸ್ಟ್ ಲೈಟ್ ಹಾಗೂ 8.6 ಲಕ್ಷ ರೂಪಾಯಿ ವೆಚ್ಚದ ನೀರಿನ ಕಾರಂಜಿಯನ್ನು ಮಂಗಳವಾರ ಸಂಜೆ ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಅವರು ಉದ್ಘಾಟಿಸಿದರು.‌ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಮ್ಮೂರು ಶೇಖರ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹನುಮಂತಪ್ಪ, ರಾಬಕೊ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರ್ ರೆಡ್ಡಿ, ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಗಾಲಿ ಶ್ರವಣ್ ಕುಮಾರ್ ರೆಡ್ಡಿ ಹಾಗೂ ಪ್ರಾಧಿಕಾರದ ಆಯುಕ್ತ ವೀರೇಂದ್ರ ಕುಂದಗೋಳ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರವಿಶಂಕರ್, ಇಂಜಿನಿಯರ್‍ಗಳಾದ ನಹೀಂ ಹಾಗೂ ಗುತ್ತಿಗೆದಾರರು ಇದ್ದರು….

Leave A Reply