ಹುಬ್ಬಳ್ಳಿ- ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಭೆ ನಡೆಸಿದ ಬಳಿಕ ಹೋರಹೋಗುತ್ತಿದ್ದ ಸುಧಾಕರ್ ಅವರ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರಿಂದ ಘೇರಾವ್ ಹಾಕಿ , ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ಬಗ್ಗೆ ಸಚಿವ ಸುಧಾಕರ್ ಹಗುರವಾಗಿ ಮಾತನಾಡಿದ್ದಾರೆಂದು ಆರೋಪಸಿ ಮುತ್ತಿಗೆ ಹಾಕಿದ್ದಾರೆ. ಹೋರಾಟಗಾರರು ಸಚಿವರ ಜೊತೆ ಕೆಲಕಾಲ ವಾಗ್ವಾದಕ್ಕೆ ಇಳಿದಿದ್ದಾರೆ. ಸಚಿವರ ಜೊತೆ ವಾಗ್ವಾದಕ್ಕಿಳಿದು ಕರವೇ ಕಾರ್ಯಕರ್ತರು  ಕಾರಿಗೆ ಅಡ್ಡಲಾಗಿ ಮಲಗಿ ಆಕ್ರೋಶ ಹೋರಹಾಕಿದ್ದಾರೆ. ಕೂಡಲೇ ನಾರಾಯಣಗೌಡ ಅವರನ್ನ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ. ಬಳಿಕ ಹೋರಾಟಗಾರರ ಸಮಾಧಾನ ಮಾಡಿದ ಅವರು ಬೆಳಗಾವಿಯ ಒಂದು ಇಂಚು ಜಮೀನು ಬಿಟ್ಟು ಕೊಡುವ ಮಾತೇ ಇಲ್ಲಾ . ಉದ್ಬವ್ ಠಾಕ್ರೆ ಟ್ವಿಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಉದ್ಬವ್ ಠಾಕ್ರೇ ಅವರ ಅಪ್ಪನಿಂದಲೇ ಆಗಿಲ್ಲಾ ಇನ್ನು ಇವನಿಂದ ಆಗುತ್ತಾ ಎಂದು ಠಾಕ್ರೆ ವಿರುದ್ಧ ಗುಡುಗಿದ್ದಾರೆ…..

About Author

Priya Bot

Leave A Reply