ಬಳ್ಳಾರಿ-  ಗೋ ಮಾಂಸ ಸೇವನೆ ಮಾಡ್ತಿನಿ ಅನ್ನೋ ಸಿದ್ದರಾಮಯ್ಯಗೆ  ಶಿಕ್ಷೆಯಾಗಬೇಕು.ಇವರ ಮೂಲಕ ಯಾರಾದರೂ ಗೋ ಮಾಂಸ ತಿಂತಿನಿ ಅಂದವರಿಗೂ ಶಿಕ್ಷೆಯಾಗುವ ಹಾಗೆ  ಮಾಡಬೇಕು. ಈ ಕುರಿತಂತೆ ಮಸೂಧೆಯನ್ನ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತಿದ್ದುಪಡಿ ಮಾಡಿ ಅನುಷ್ಠಾನ ಮಾಡೋಣ ಎಂದು  ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಹೊಸಪೇಟೆಯಲ್ಲಿ ಆಯೋಜಿಸಿದ್ದ ಜನ ಸೇವಕ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ, ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ಭಾರತದಲ್ಲಿ ಹಿಂದುಗಳದ್ದು ದೊಡ್ಡ ಸಂಖ್ಯೆಯಿದೆ.ಅಲ್ಲದೇ ಹಿಂದುಗಳು ಗೋ ಮಾತೆಯನ್ನ ಅತ್ಯಂತ ಪವಿತ್ರ ಸ್ಥಾನದಲ್ಲಿ ಪೂಜೆ ಮಾಡ್ತಾರೆ. ಆದರೆ, ಇದರ ಪರಿಜ್ಞಾನ ವಿಲ್ಲದ ಸಿದ್ದರಾಮಯ್ಯ ಗೋ ಹತ್ಯೆ ಸಮರ್ಥಿಸಿಕೊಳ್ಳೋದಲ್ಲದೇ ತಿಂತಿನಿ ಅಂತಾರೆ. ಇಂಥವರನ್ನ ಏನು ಮಾಡಬೇಕು..? ಕೇವಲ ಗೋ ಮಾತೆ ವಧೆ ಮಾಡುವವರಿಗೆ ಶಿಕ್ಷೆ ಕೊಡೋಕೆ ನೂತನ ಕಾಯ್ದೆಯಲ್ಲಿ ಅವಕಾಶವಿದೆ. ಹೀಗಾಗಿ ಕಾಯ್ದೆಗೆ ತಿದ್ದು ಪಡಿ ತಂದು ಗೋ ಮಾಂಸ ತಿಂತಿನಿ ಅನ್ನೋರಿಗೆ ಶಿಕ್ಷೆ ಕೊಡಿಸೋಣ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣಗೆ ಶೆಟ್ಟರ್ ತಿಳಿಸಿದರು.

Leave A Reply