ಓಡಿಸಾ- ಅಪಾರ ಪ್ರಮಾಣದ ಕಾಡ ಅರಣ್ಯ ಸಂಪತ್ತು , ವನ್ಯ ಜೀವಿಗಳು ಆಶ್ರಯ ತಾಣವಾದ ಓಡಿಸಾ ರಾಜ್ಯದಲ್ಲಿ ಕಾಡಿಗೆ ಬೆಂಕಿ ಬಿದ್ದು ಸಾವಿರಾರು ಕಾಡು ಪ್ರಾಣಿಗಳು ಸಜೀವ ದಹನವಾಗಿವೆ.  ಸಿಮ್ಲಿಪಾಲ್ನಲ್ಲಿ  ಜಿಲ್ಲೆ ಒಂದರಲ್ಲಿಯೇ ಸುಮಾರು 154 ಕಡೆಗಳಲ್ಲಿ ಕಾಡಿಗೆ ಬೆಂಕಿ ಬಿದ್ದಿದೆ‌. ಈ ಬೆಂಕಿ ಕಾಡ್ಗಿಚ್ಚಿನ ಹಾಗೆ ಹಬ್ಬಿದ್ದು. ನಿಯಂತ್ರಿಸುವುದು ಕಷ್ಟ ಎನ್ನಿವ ಮಟ್ಟಿಗೆ ಹಬ್ಬಿದೆ‌. ಇನ್ನು ಸಿಮ್ಲಿಪಾಲ್ನಲ ಸೇರಿದಂತೆ ಒಟ್ಟು 395 ಕಡೆಗಳಲ್ಲಿ ಬೆಂಕಿ ಬಿದಿದ್ದು.

ಕಳೆದ ಮೂರು ದಿನಗಳಿಂದ ಸಿಮ್ಲಿಪಾಲ್ ಸೇರಿದಂತೆ ಹಲವೆಡೆ ಕಾಳ್ಗಿಚ್ಚಿನ ಹಾವಳಿ ಮಿತಿ ಮೀರುತ್ತಿದ್ದು, ವನ್ಯ ಜೀವಿಗಳು, ವೃಕ್ಷಗಳು, ಔಷಧೀಯ ಸಸಿಗಳು ಸೇರಿದಂತೆ ಕಾಡಿನ ಅತ್ಯಮೂಲ್ಯ ಸಂಪತ್ತು ನಾಶವಾಗಿದೆ ಎಂದು ಫಾರೆಸ್ಟ್ ಸರ್ವೇ ಆಫ್ ಇಂಡಿಯಾ ಹೇಳಿದೆ. ಈ ಕುರಿತು ಅನೇಕ ಪರಿಸರವಾದಿಗಳು ಸರ್ಕಾರವನ್ನು ಕಟುವಾಗಿ ಟೀಕೆ ಮಾಡುವ ಮೂಲಕ ತಮ್ನ ಅಸಮಾಧಾನ ಹೊರಹಾಕಿದ್ದರು.

ಅಲ್ಲದೇ ಖ್ಯಾತ ನಟಿ ದಿಯಾ ಮಿರ್ಜಾ ಅವರು ಸಹ ಕಾಡಿಗೆ ಈ ಪರಿಸ್ಥಿತಿ ಬಂದಿದೆ ಇದು ನಮಗೆ ಯಾರಿಗೂ ಕಾಣುತಿಲ್ಲವೇ ಎಂದು ಟ್ವೀಟ್ ಮಾಡುವ ಮೂಲಕ ನಾಸ ಸೆಟ್ಲೈಟ್ ಇಮೇಜ್ ಹಂಚಿಕೊಂಡಿದ್ದರು. ಅವರು ಒಂದು ಟ್ವೀಟ್ವಗೆ ರೀ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನ ಗೊರಹಾಕಿದ್ದರು.

ಆದ್ರೆ ಇಂದು ಆ ಓಡಿಸಾದ ಸಿಮ್ಲಿಪಾಲ್ನಲ್ಲಿ ಮಳೆ ಆರಂಭವಾಗಿದೆ ಇನ್ನು ಎರಡು ದಿನಗಳ ಕಾಲ ಮಳೆ ಆಗಲಿದ್ದು ಆ ದೇವರೆ ಅಲ್ಲಿ ಮಳೆ ತಂದಿದ್ದಾನೆ ಎಂದು ನಟಿ ದಿಯಾ ಮಿರ್ಜಾ ಟ್ವೀಟ್ ಮಾಡಿ ದೇವರಿಗೆ ಒಂದು ಧನ್ಯವಾದ ಹೇಳಿದ್ದಾರೆ.

ಇನ್ನು ಸಿಮ್ಲಿಪಾಲ್ನಲ್ಲಿಯ ಕಾಡ್ಗಿಚ್ಚು ಆರಿಸಲು ಹಲವಾರು ಜನರು ಪ್ರಯತ್ನ ಪಟ್ಟಿದ್ದಾರೆ. ಅಲ್ಲಿ ಕೆಲಸ ಮಾಡುವ ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿಯಲ್ಲಿ ಸುಡುತ್ತಿರುವ ಕಾಡಿನ ಮಧ್ಯದಲ್ಲಿ ನಿಂತಾಗ ಮಳೆ ಬಂದ ಕಾರಣ ಮಳೆಯಲ್ಲಿ ನೆನೆದು ಕುಣಿದು ಕುಪ್ಪಳಿಸಿದ್ದಾರೆ. ಆ ದೇವರು ನಮ್ಮ ಕಾಡನ್ನು ರಕ್ಷಣೆ ಮಾಡಿದೆ ಎಂದು ಸಂತೋಷದಿಂದ ಕುಣಿದಾಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply