ಅಹಂಭಾವ ಸಲ್ಲದು

0

ಡಾ. ಈಶ್ವರಾನಂದ ಸ್ವಾಮೀಜಿ

ಸಾಮಾನ್ಯವಾಗಿ ಮಾನವನಲ್ಲಿ ಅಹಂಕಾರವು ಸೂಕ್ಷ್ಮರೂಪದಲ್ಲಿ ಇದ್ದೇ ಇರುತ್ತದೆ. ಅದನ್ನು ಹೊರತೆಗೆಯಲು ಮನಸ್ಸನ್ನು ಚಿಂತನ-ಮಥನ ಎಂಬ ಕುಲುಮೆಗೆ ಹಾಕಿ ಪುಟಕಿಕ್ಕಬೇಕಾತ್ತದೆ. ಆಗ ಮಾತ್ರ ಜ್ಞಾನ ಹಾಗೂ ಅಧ್ಯಾತ್ಮದ ಸಾದನೆಯಿಂದ ಅವನಲ್ಲಿರುವ ಅಹಂಕಾರ ಮೊಳಕೆಯ ಕಸವನ್ನು ಬೇರು ಸಮೇತವಾಗಿ ಕಿತ್ತು ಹಾಕುಬಹುದು. ಒಬ್ಬ ರಾಜ. ಅವನು ಈ ದೇಶಕ್ಕೆ ನಾನೇ ಸರ್ವಸ್ವ, ನನ್ನಿಂದಲೇ ಎಲ್ಲವೂ, ನಾನೇ ದೇವರೆಂಬ ಭಾವವು ಮನದಲ್ಲಿ ಆಳವಾದ ಬೇರು ಬಿಟ್ಟು ಹೆಮ್ಮರವಾಗಿ ಬೆಳೆದಿತ್ತು, ಆದರೆ ಅವನಿಗೆ ಗೊತ್ತಿರಲಿಲ್ಲ ತಾನು ತೃಣ, ಕ್ಷಣಿಕವೆಂದು. ಈ ಜಗತ್ತಿಗೆಲ್ಲ ರಾಜನೊಬ್ಬ ಇದ್ದಾನೆ ಅವನೇ ದೇವರು. ಅವನಿಂದಲೇ ಈ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯವಾಗುತ್ತದೆ. ಇಂತಹ ರಾಜನು ತಾನೇ ದೇವರು ಎಂಬ ಹೆಮ್ಮ, ಅಭಿಮಾನ, ಅಹಂಕಾರದಿಂದ ಮೆರೆತಿದ್ದವನಿಗೆ ದಾಸಿಮಯ್ಯನವರು ದೇವರ ಇರುವಿಕೆಯನ್ನು ಹೇಗಿದೆ ನಿನ್ನ ಇರುವಿಕೆ ಹೇಗಿದೆ ಎಂಬುವುದನ್ನು ಹಲವಾರು ವಚನಗಳಲ್ಲಿ ಹೇಳಿದರೂ ಉದಾಹರಣೆಗೆ ಒಂದೆರಡು ಮಾತ್ರ ಇಲ್ಲಿ ಉಲ್ಲೇಖಿಸಬಹುದು.

ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರುಸಿದೆ
ಶರೀರದೊಳಗಾತ್ಮನನಾರು ಕಾಣದಂತಿರಿಸಿದೆ.
ನೀ ಬೆರಸಿದ ಭೇದಕ್ಕೆ ಬೆರಗಾದೆನಯ್ಯ! ರಾಮನಾಥ.
ದೇವರು ಮರದಲ್ಲಿ ಅಗ್ನಿ, ಹಾಲಿನಲ್ಲಿ ತುಪ್ಪವಿರುವಂತೆ ಶರೀರದಲ್ಲಿ ಇದ್ದು ಎಲ್ಲವನ್ನು ನಿರೀಕ್ಷಣೆ ಮಾಡುತ್ತಿರುತ್ತಾನೆ. ಅವನು-
ಮಣಿಗಣ ಸೂತ್ರದಂತೆ ತ್ರಿಣೆಯ ನೀನಿಪ್ಪೆಯಯ್ಯ
ಎಣಿಸುವಡೆ ತನು ಭಿನ್ನ ಆತ್ಮನೊಬ್ಬನೆ.
ಅಣುರೇಣು ಮಧ್ಯದಲ್ಲಿ ಗುಣಭರಿತ ನೀನೆಂದು
ಮಣಿಯುತಿರ್ಪೆನಯ್ಯಾ, ರಾಮನಾಥ.

ದೇವನು ಸರ್ವವ್ಯಾಪಕ. ಅನೇಕ ಮಣಿಗಳನ್ನು ಕೂಡಿಸಿ ಸರವನ್ನಾಗಿ ಮಾಡಿದ ದಾರದಂತೆ, ಅವನು ಪ್ರತಿಯೊಂದು ಅಣು-ಅಣುವಿನಲ್ಲಿಯೂ ಇದ್ದಾನೆ. ಸಕಲ ಜೀವಿಗಳಲ್ಲಿ ದೇವರು ಆತ್ಮ ರೂಪಿಯಾಗಿ ಅಡಗಿದ್ದಾನೆ. ಆದರೆ ನೀನೆಲ್ಲಿ? ಒಬ್ಬ ಸಾಮನ್ಯ ರಾಜ ದೇವನಾಗಬಲ್ಲನೇ? ಇಲ್ಲ. ಎಂಬ ಭಾವವು ಇಲ್ಲಿ ಕಾಣಬಹುದು.
ಅಣುರೇಣು ಮಧ್ಯದ ಪ್ರಣವದಾಧಾರ
ಭುವನಾಧೀಶನೊಬ್ಬನೆಯಯ್ಯ.
ಇದೆ ಪರಿಪೂರ್ಣವೆಂದೆನ್ನದನ್ಯ ದೈವವ ಸ್ಮರಿಸುವ
ಭವಿಯನೆಂತು ಭಕ್ತನೆಂಬೆನೈ? ರಾಮನಾಥ.

ಪ್ರಸ್ತುತ ಈ ವಚನದಲ್ಲಿ ದೇವರು ಇಲ್ಲದ ಸ್ಥಳವೇ ಇಲ್ಲ. ಅಣುರೇಣುತೃಣಕಾಷ್ಠಾದಿಗಳಲ್ಲಿ ಆತ್ಮ (ಚೈತನ್ಯ) ರೂಪದಿಂದ ಇರುವನೆಂದು ತಿಳಿಸಿ, ಈ ವಚನದ ಕೊನೆಯ ಎರಡು ಸಾಲಿನಲ್ಲಿ ಈಶ್ವರನೊಬ್ಬನೆ ದೈವ, ಅನ್ಯ ದೈವಗಳೆಲ್ಲ ಅವನ ತೊತ್ತಿನ ಮಕ್ಕಳು. ರಾಜನು ಸಹ ಒಬ್ಬ ಸೇವಕ. ಅವನಾಡಿಸುವ ಸೂತ್ರದ ಗೊಂಬೆ. ಇದನೆಲ್ಲ ಅರಿತ ಒಬ್ಬ ಗುರುವಿನ ಹತ್ತಿರ ಅಹಂಕಾರದಿಂದ ಕೂಡಿದ ರಾಜನು ಹೋದಾಗ ನಡೆದ ಸಂಭಾಷಣೆ ಹೀಗೆ ನೋಡಬಹುದು.
ರಾಜ ಃ- ನಾನಾರು ನಿಮಗೆ ಗೊತ್ತೇ?
ಸಂತ ಃ- ನನಗೆ ಗೊತ್ತಿಲ್ಲ.
ರಾಜ ಃ-ನಾನು ಈ ದೇಶದ ಚಕ್ರವರ್ತಿ. ದೋರೆ, ರಾಜ.
ಸಂತ ಃ- ಎಷ್ಟು ವರ್ಷಗಳಿಂದ?
ರಾಜ ಃ- ಹದಿನೈದು ವರ್ಷಗಳಿಂದ.
ಸಂತ ಃ- ಅದಕ್ಕೂ ಮೊದಲು ನೀನು ರಾಜನಾಗಿರಲಿಲ್ಲ?
ರಾಜ ಃ- ಹೌದು.
ಸಂತ ಃ- ಈಗಾಲಾದರೂ ನೆರೆಹೊರೆಯ ರಾಜನರು ನಿನ್ನನ್ನು ಸೋಲಿಸಿದರೆ ನೀನು ರಾಜನಾಗಿರುವುದಿಲ್ಲ.
ಸಂತ ಃ- ಹಾಗಾದರೆ ನೀನು ಚಕ್ರವರ್ತಿ ಎಂಬುವುದು ಸತ್ಯವಲ್ಲ. ನಿನ್ನ ಸೋಲಿಸಿದ ರಾಜನಿಗೆ ಇನ್ನೊರ್ವ ಸೋಲಿಸುವುನು ಅವನೂ ಅಲ್ಲ ಹೀಗೆ ಒಬ್ಬರಾದ ನಂತರ ಒಬ್ಬರು ಸೋಲನ್ನು ಅನುಭವಿಸಬೇಕಾಗುತ್ತದೆ. ಅವರೆಲ್ಲರೂ ರಾಜನಾಗಲು ಸಾಧ್ಯವಿಲ್ಲ.

ಎಂದೂ, ಯಾರಿಂದಲೂ ಸೋಲದ ರಾಜ ದೇವರು, ಅವನನ್ನು ಸೋಲಿಬೇಕಾದರೆ ಶರಣಾಗತರಾಗಬೇಕು. ನಮ್ಮಲ್ಲಿರುವ ಅಹಂಕಾರ ಜ್ಞಾನದ ಮಥನದಿಂದ ಸುಟ್ಟು ಹಾಕಿ ಭಕ್ತಿಯಿಂದ ಅವನನ್ನು ಸೋಲಿಸಿದಾಗ ಮಾತ್ರ ನೀನು ರಾಜ ಮಹಾರಾಜ, ದೇವಮಾನವ ನಾಗುವಿ ಎಂದು ಹೇಳಿತಿದ್ದಂತೆಯೇ ರಾಜನ ಮನದಲ್ಲಿದ್ದ ಅಹಂಭಾವ ಅಳಿದು ಅರಿವಿನ ರವಿ ಉದಯಿಸಿದ. ಆಗ ಅವನು ನಿಜವಾದ ಪ್ರಜಾ ಸೇವಕನಾಗಿ ಎಲ್ಲರ ಪ್ರೀತಿಗೆ ಪಾತ್ರನಾಗಿ ದೇವನಾದನು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply