ಬೆಂಗಳೂರು -ಬಹು ನಿರೀಕ್ಷಿತ ಈ ವರ್ಷದ ಬಜೆಟ್ ಮಂಡನೆಯನ್ನ ಸಿ ಎಮ್ ಯಡಿಯೂರಪ್ಪ ಅವರು ಮಂಡನೆ ಮಾಡಿದ್ದು, ಒಟ್ಟು  2 ಲಕ್ಷ 43 ಸಾವಿರ 734 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ವಲಯವಾರು ಬಜೆಟ್ ಮಂಡನೆ ಮಾಡಿದ್ದು, ಪೆಟ್ರೋಲ್ ಡೀಸೆಲ್ ‌ಮೇಲಿನ ತೆರಿಗೆಯನ್ನು ಕಡಿಮೆ ಮಾಡಿಲ್ಲಾ, ಅಲ್ಲದೆ ಅಬಕಾರಿ ತೆರಿಗೆ ಹೆಚ್ಚಳ ಮಾಡಿಲ್ಲಾ ಹೀಗಾಗಿ ಮದ್ಯ  ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿ ವರ್ಷದ ಬಜೆಟ್ ನಲ್ಲಿ ಅಬಕಾರಿ ತೆರೆಗೆ ಯನ್ನು ಹೆಚ್ಚಳ ಮಾಡುತ್ತಾಬಂದಿರುವ ಸರ್ಕಾರ ಈ ವರ್ಷ ಅಬಕಾರಿ ತೆರಿಗೆಯನ್ನು ಹೆಚ್ಚಳ ಮಾಡಿಲ್ಲಾ.  ಮಹಿಳೆಯರಿಗೆ ಶೇಖಡಾ 4 ರಷ್ಟು ಬಡ್ಡಿದರಲ್ಲಿ ಸಾಲ ಸೌಲಭ್ಯ ನೀಡಿದ್ದಾರೆ. ಇದರಿಂದಾಗಿ 2 ಕೋಟಿ ರೂಪಾಯಿ ವರೆಗೆ ಸಾಲ ಪಡೆಯಬಹುದಾಗಿದೆ‌. ಇನ್ನು ಬೆಂಗಳೂರು ನಗರದಲ್ಲಿ  7500 ಸಿಸಿ ಕ್ಯಾಮರಾಗಳ ಅಳವಡಿಕೆಗೆ ಮುಂದಾಗಿದ್ದು ಸಿಸಿ ಕ್ಯಾಮರಾಗಳ ಅಳವಡಿಕೆ ಯೋಜನೆ ರೂಪಿಸಲಾಗಿದೆ.

ಮಹಿಳಾ ದಿನಾಚರಣೆಯ ಅಂಗವಾಗಿ, ಮಹಿಳೆಯರಿಗೆ ಸಬ್ಸಿಡಿಯಲ್ಲಿ ಸಾಲ ಮಂಜೂರು ಮಾಡಲಾಗಿದೆ. ಇನ್ನು ಮಹಿಳೆಯರಿಗೆ ಹೆರಿಗೆ ರಜೆಯನ್ನು  6 ತಿಂಗಳಿಗೆ ವಿಸ್ತರಣೆ ಮಾಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply