ನರಗುಂದ ತಾಲೂಕಿನಾದ್ಯಂತ ಉತ್ತಮ ಮಳೆ

0

ಗದಗ – ಪಟ್ಟಣ ಸೇರಿ ತಾಲೂಕಿನಾದ್ಯಂತ ಮಂಗಳವಾರ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ರೈತ ಸಮುದಾಯದ ಹರ್ಷ ಇಮ್ಮಡಿಯಾಗಿದೆ. ಮುಂಗಾರು ಪೂರ್ವ ಮಳೆಯಿಂದಾಗಿ ತಾಲೂಕಿನಾದ್ಯಂತ ಶೇ. ೮೦ರಷ್ಟು ಬಿತ್ತನೆಯಾಗಿ ಭೂಮಿಯೆಲ್ಲ ಹಸಿರಾಗಿತ್ತು. ಬಿತ್ತನೆ, ಎಡೆ ಹೊಡೆಯುವುದು, ಕ್ರಿಮಿನಾಶಕ ಸಿಂಪಡಣೆ, ರಸಗೊಬ್ಬರ ಹಾಕುವುದು, ಕಳೆ ತೆಗೆಯುವ ಕಾರ್ಯದಲ್ಲಿ ತಲ್ಲೀನರಾಗಿದ್ದರು. ಒಂದು ವಾರದಿಂದ ಬಿಸಿಲು ಗಾಳಿಯಿಂದ ಬೆಳೆಗಳು ಬಾಡುವ ಸ್ಥಿತಿಯಲ್ಲಿದ್ದವು. ಇದು ರೈತರನ್ನು ಚಿಂತೆಗೀಡು ಮಾಡಿತ್ತು. ಆದರೆ ಮಂಗಳವಾರ ಸಂಜೆ ರೈತರ ನಿರೀಕ್ಷೆಯಂತೆ ಉತ್ತಮ ಮಳೆಯಾಗಿದೆ.

ತಾಲೂಕಿನ ಹಿರೇಕೊಪ್ಪ ಕುರುಗೋವಿನಕೊಪ್ಪ ಚಿಕ್ಕನರಗುಂದ ಬೇನಕನಕೊಪ್ಪ ಸಂಕದಾಳ ನರಗುಂದ ಕಣಕಿಕೊಪ್ಪ ಕಲಕೇರಿ ಹುಣಸಿಕಟ್ಟಿ ಬೈರನಟ್ಟಿ ಸೇರಿ ಎಲ್ಲೆಡೆ ಉತ್ತಮ ಮಳೆಯಾಗಿದೆ. ಎರಡು ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆಯಾಗಿದ್ದು ಹಳ್ಳ, ಕೆರೆ, ಕೃಷಿ ಹೊಂಡ, ಬದುವು, ತಗ್ಗು ಪ್ರದೇಶಗಳು ತುಂಬಿ ಹರಿದಿವೆ. ಸಂಜೆ ಮಳೆಯಾಗಿದ್ದರಿಂದ ರೈತರು, ಕೂಲಿಕಾರರು ಮಳೆಯಲ್ಲಿಯೇ ನೆನೆದು ಮನೆಯತ್ತ ಸಾಗಿದರು. ಪ್ರಸಕ್ತ ಮುಂಗಾರಿನಲ್ಲಿ ಹದವರ್ತಿ ಮಳೆಯಾಗಿ ಕೆರೆ, ಕೃಷಿ ಹೊಂಡ, ಹಳ್ಳ, ಬದುವುಗಳಲ್ಲಿ ನೀರು ಸಂಗ್ರಹ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply