ಬೆಂಗಳೂರು-  ಮೊಬೈಲ್ ಫೋನ್ ನಿತ್ಯ ಜೀವನದ ನಮ್ಮ ಅವಿಭಾಜ್ಯ ಅಂಗವಾಗಿದೆ. ಸಾಮಾನ್ಯವಾಗಿ ಬಹುತೇಕರ ಪ್ರತಿ ದಿನ ಆರಂಭವಾಗುವುದೇ ಮೊಬೈಲ್ ಸ್ಕ್ರೀನ್ ನೋಡುವ ಮೂಲಕ. ಇನ್ನು ಗೂಗಲ್ , ಗೂಗಲ್ ಮ್ಯಾಪ್ ಬಳಸದವರೇ ಇಲ್ಲಾ. ಸಾಮಾನ್ಯವಾಗಿ ನಾವು ಯಾರ ಮನೆ ಊರು ಹೀಗೆ ನಾವು ಯಾವುದೇ ಸ್ಥಳದ ಮಾಹಿತಿ ಪಡೆಯಲು ಗೂಗಲ್ ಮ್ಯಾಪ್ ಬಳಸುತ್ತೆವೆ. ಆದ್ರೆ ಈ ಗೂಗಲ್ ಮ್ಯಾಪ್ ಬಳಸಲು ಕೆಲ ನಿಯಮಗಳು ಬಂದಿವೆ. ನಾವು ದ್ವಿಚಕ್ರ ಕಾರ್ ಓಡಿಸುವಾಗ ಮೊಬೈಲ್ ಬಳಕೆ ಮಾಡುವುದನ್ನು ಸರ್ಕಾರ ನಿಷೇಧ ಹೇರಿದೆ. ಕಾರಣ ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದ್ರೆ ಅಪಘಾತವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಸರ್ಕಾರ ಮೊಬೈಲ್ ಬಳಕೆಗೆ ಬ್ರೇಕ್ ಹಾಕಿದೆ. ಇನ್ನು‌ ಕೈ ನಲ್ಲಿ  ಮೊಬೈಲ್ ಹಿಡಿದು ಮ್ಯಾಪ್ ನೋಡಿಕೊಂಡು ವಾಹನ ಚಲಾಯಿಸಿದರೆ ನಿಮಗೆ ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಾರೆ. ಅದು ನೂರು ಸಾವಿರ ಇದ್ರೆ ಪರವಾಗಿಲ್ಲಾ ಆದ್ರೆ ನಮಗೆ ದಂಡ 5 ಸಾವಿರ ಸಹ ಹಾಕಬಹುದು.

About Author

Priya Bot

Leave A Reply