ಕಸದ ತೊಟ್ಟಿಯಂತಾಗಿದ ಸರ್ಕಾರಿ ಕಚೇರಿಗಳು  ಮತ್ತು ವಾಣಿಜ್ಯ ಸಂಕೀರ್ಣಗಳು..!

0

ವಿಜಯಪುರ-  ಸರ್ಕಾರಿ ಕಚೇರಿಗಳು  ಹಾಗೂ ವಾಣಿಜ್ಯ ಸಂಕೀರ್ಣಗಳು ಲಾಕ್ಡೌನ್ ನಿಂದಾಗಿ   ಕಸದ ತೊಟ್ಟಿಯಂತಾಗಿದೆ ವಿಜಯಪುರ ನಗರದ ಸಬ್ ರಜಿಸ್ಟರ ಆಫೀಸ್ ಹಾಗೂ ಗೃಹ ಮಂಡಳಿ ಇರುವ ವಾಣಿಜ್ಯ ಸಂಕೀರ್ಣ ಜನರನ್ನ ಕಸದ ರಾಶಿಯೆ ಸ್ವಾಗತಿಸುತ್ತೆ. ನಿತ್ಯ ಕೋಟ್ಯಾಂತರ ರೂಪಾಯಿ ವ್ಯವಹಾರ ಇಲ್ಲಿ ನಡೆಯುತ್ತದೆ.  ಬಾಂಡ್ ರೈಟರ್. ಝರಾಕ್ಸ, ಸೌಹಾರ್ದ ಬ್ಯಾಂಕ್ ಹೊಂದಿರುವ ಆವರಣ ಇಂದು ಅಕ್ಷರಶಃ ಕಸದ ತೊಟ್ಟಿಯಾಗಿವೆ‌. ನಿಧಾನವಾಗಿ ಸರಕಾರ ಲಾಕ್ಡೌನ್ ಸಡಲಿಕೆ ಮಾಡುವತ್ತ ಚಿಂತನೆ ನಡೆಸುತ್ತಿದೆ.

ಆದರೆ ಈ ವಾಣಿಜ್ಯ ಸಂಕಿರ್ಣದಲ್ಲಿ ಊಟ ಮಾಡಿದ ತಟ್ಟೆ, ಎಲ್ಲೆಂದರಲ್ಲಿ ಪಾನ, ಗುಟಕಾ ತಿಂದು ಉಗುಳಿ ಗಲೀಜ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮದ್ಯಪಾನ ಮಾಡಿ ಮದ್ಯದ ಪಾಕೆಟ್, ಗ್ಲಾಸ್ ಕೂಡ ಅಲ್ಲೆ ಎಸೆದಿದ್ದಾರೆ. ಕರೋನಾ ಎರಡನೇ ಅಲೆಯಿಂದಾಗಿ ರಾಜ್ಯ ಲಾಕ್ಡೌನ ಆಗಿರೋದರಿಂದ ಬಹುತೇಕ ಕಚೇರಿಗಳು ವಾಣಿಜ್ಯ ಸಂಕೀರ್ಣಗಳಿಗೆ ಬೀಗ ಬಿದ್ದಿತ್ತು. ಆದರೆ ಸಂಕೀರ್ಣದ ಆವರಣ ಕಿಡಗೇಡಿಗಳು  ಗಲೀಜು ಮಾಡಿದ್ದಾರೆ. ಅದನ್ನು ಶುಚಿಗೊಳಿಸಲು ಸುಮಾರು ಮೂರನಾಲ್ಕು ದಿನವಾದರೂ ಬೇಕಾಗುತ್ತೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply