ಬೆಳಗಾವಿ- ಗ್ರಾಮ ಪಂಚಾಯತಿ ಚುನಾವಣೆ ಎಂದರೆ ಹಾಗೇ. ಇಲ್ಲಿ ಚುನಾವಣೆ ಮುಗಿದ ಬಳಿಕವೂ ಚುನಾವಣೆ ಕಾವು ಕಡಿಮೆ ಅಗೋದಿಲ್ಲಾ. ಹೌದು ಇದೇ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಚುನಾವಣೆ ಕಾವು ಚುನಾವಣೆ ಮುಗಿದ ಬಳಿಕವೂ ಆರಲೇ ಇಲ್ಲಾ. ಈ ಗ್ರಾಮದಲ್ಲಿ ದಾಯದಿಗಳ ಚುನಾವಣೆ ನಿಂತು ಆ ಚುನಾವಣೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ

ಕಳೆದ 10 ವರ್ಷಗಳಿಂದ ಕೇವಲ ಶಬ್ಬೀರ್ ಹಾಗೂ ಅವರ ಬೆಂಬಲಿ ಅಭ್ಯರ್ಥಿಗಳೆ ಗೆದ್ದು ಬರುತ್ತಿದ್ರು . ಆದ್ಎ ಕಳೆದ ಹತ್ತು ವರ್ಷದಲ್ಲಿ ಗ್ರಾಮದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ಆಗಿಲ್ಲಾ ೀ ಕಾರಣಕ್ಕಾಗೆ ಈ ಬಾರಿ ಬಶೀರ್ ಅವರ ಗುಂಪು ಚುನಾವಣೆಗೆ ನಿಂತು ಬರೊಬ್ಬರಿ 10 ಸ್ಥಾನ ಗೆಲ್ಲುವುದರಲ್ಲಿ ಯಶಸ್ವಿಯಾಗಿತ್ತು.

ಗೆದ್ದ ಹುಮ್ಮಸಿನಲ್ಲಿದ್ದ ಬಶೀರ್ ತಂಡದವರು ಪಕ್ಕದ ಗ್ರಾಮ ಬಸಾಪುರಕ್ಕೆ ಹೋಗಿ ಅಲ್ಲಿಯೂ ಸಹ ಪಟಾಕಿ ಸಿಡಿಸಿ ಸಂಬಂಧಿಕರಿಗೆ ಸಿಹಿ ಹಂಚಿ ಬಂದಿದ್ದಾರೆ. ಆದರೆ ಪಟಾಕಿ ಸಿಡಿಸುವ ವಿಷಯಕ್ಕೆ ಸೋತ ಶಬ್ಬೀರ್ ಮನೆಯವರ ಜೊತೆಗೆ ಗಲಾಟೆ ಆರಂಭವಾಗಿದೆ. ಈ ವಿಷಯ ಸೋತ ಶಬ್ಬೀರ್ ಗೆ ತಿಳಿದ ಕೂಡಲೇ ಅಲ್ಲಿಗೆ ಬಂದ ಸೋತ ಶಬ್ಬೀರ್ ಹಾಗೂ ಬಶೀರ್ ನಡುವೆ ಗಲಾಟೆ ಆರಂಭವಾಗಿದೆ. ಆದರೆ ಅಲ್ಲಿದ್ದ ಸ್ಥಳಿಯರು
ಇವರಿಗೆ ಬುದ್ದಿ ಹೇಳಿ ಕಳಿಸೋಕೆ ಮುಂದಾಗಿದ್ದಾರೆ ಆದರೆ ಜಗಳ ವಿಕೊಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಜನರು ಮೂಕ ಪ್ರೇಕ್ಷಕರಾದರು. ಮನೆಯಿಂದ ಹೊರ ಬಂದ ಶಾನೂರ ಮುಲ್ಲಾ ಅವರನ್ನ ಎಳೆದ ಶಬ್ಬೀರ್ ಮನೆಯವರು ಏಕಾಏಕಿ ಶಾನೂರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡೋಕೆ ಶುರು ಮಾಡಿದ್ದಾರೆ. ನೋಡುತ್ತಿದ್ದಂತೆ ಶಾನೂರ ಮುಲ್ಲಾ ಕೊಲೆ ಆಗಿದೆ.

Leave A Reply