ಹುಬ್ಬಳ್ಳಿ-  ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಅದೆಷ್ಟೋ ಬಡ ಜೀವಗಳು ಈಗ ಹೊಟ್ಟೆ ಪಾಡಿಗಾಗಿ ಪರದಾಡುವಂತಾಗಿದೆ. ಹಾಗೆಯೇ ಇಲ್ಲೊಬ್ಬಳು ಅಜ್ಜಿ ಇತ್ತ ಮನೆನೂ ಇಲ್ಲ, ಇತ್ತ ವ್ಯಾಪಾರವು  ಇಲ್ಲದೆ ಬೀದಿಗೆ ಬಿದ್ದಿದ್ದಾಳೆ.

ಈ ಅಜ್ಜಿಯ ಹೆಸರು ಸರೋಜಾ. ಇವಳು ಮೂಲತಃ  ಜಗದೀಶ್ ನಗರದ ನಿವಾಸಿ. ಅಜ್ಜಿ ಸುಮಾರು 58 ವರ್ಷದಿಂದ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದಳು. ಆದರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಅಜ್ಜಿಯ ಹೊಟ್ಟೆಗೆ ಕಲ್ಲು ಹಾಕಿದ್ದಾರೆ. ದಾಖಲೆಗಳು ಇದ್ದರು ಕೂಡ ಪಾಲಿಕೆ ಅಧಿಕಾರಿಗಳು ಏಕಾಏಕಿ ಬಂದು ಅಜ್ಜಿಯ ವ್ಯಾಪಾರಕ್ಕೆ ಬ್ರೇಕ್ ಹಾಕಿದ್ದಾರೆ. ಈಗ ಸರೋಜಮ್ಮ ಹಸಿವಿನ ಅಂಚಿನಲ್ಲಿ ಇದ್ದಾಳೆ. ಅಷ್ಟೇ ಅಲ್ಲದೆ ಜಗದೀಶ್ ನಗರದಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ಹಾಕಿಸಿಕೊಡುವುದಾಗಿ   ಅಧಿಕಾರಿಗಳು ಹೇಳಿದ್ದರು, ಆದರೆ ಕಳೆದ 10 ವರ್ಷದಿಂದ ಇನ್ನುವರೆಗೂ ಯಾವುದೇ ಆಶ್ರಯಕ್ಕೆ ದಾರಿ ಮಾಡಿಕೊಡ್ಡಿಲ್ಲ. ಇತ್ತ ವ್ಯಾಪಾರ ಕೂಡಾ ಇಲ್ಲದೆ,, ಅಜ್ಜಿ ಈಗ ಬೀದಿಗೆ ಬಿದ್ದಿದ್ದಾಳೆ. ವಸತಿ ಸಚಿವರಾದ ಇಲ್ಲಿನ ಜಗದೀಶ್ ನಗರದ ಬಡ ಜೀವಗಳಿಗೆ ಆದಷ್ಟು ಬೇಗ ಆಶ್ರಯ ಕಲ್ಪಸಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಇನ್ನುವರೆಗೂ ಯಾವುದೇ ಕಾರ್ಯ ನಡೆದಿಲ್ಲ.

Leave A Reply