ರಾಯಚೂರು -ಮಾಜಿ ಶಾಸಕರ ಮೊಮ್ಮಕ್ಕಳು ಹೊಂಡದಲ್ಲಿ ಈಜಲು ಹೋಗಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ, ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಬಲ್ಲಟಗಿ ಗ್ರಾಮದಲ್ಲಿ ನಡೆದಿದೆ.  ಭಾನುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಮಕ್ಕಳಿಬ್ಬರು ಹೊಂಡವೊಂದರಲ್ಲಿ ಶವವಾಗಿ ಇಂದು ಬೆಳಗಿನ ಜಾವ ಪತ್ತೆಯಾಗಿದ್ದಾರೆ.

ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಕಿರಿಯ ಪುತ್ರ ಶಿವಾನಂದ ಅವರ  ಮಕ್ಕಳಾದ ವರುಣ ನಾಯಕ (11), ಹಾಗೂ  ತನಯ ನಾಯಕ (5) ಮೃತರಾದ ಬಾಲಕರು. ನಿನ್ನೆ ಸಂಜೆಯಿಂದ ಆಟವಾಡಲು ಮನೆಯಿಂದ ಹೊರಹೋಗಿದ್ದ ಇಬ್ಬರು ಬಾಲಕರು, ನಿನ್ನೆ  ಸಂಜೆಯಾದರೂ ಮನೆಗೆ  ಹಿಂತಿರುಗಿ ಬಂದಿರಲಿಲ್ಲ. ಭಾನುವಾರ ಸಂಜೆಯಿಂದ ಮನೆಯವರು ಗಾಬರಿಯಾಗಿ ಎಲ್ಲ ಕಡೆಗೂ ಹುಡುಕಾಟ ಆರಂಭಿಸಿದ್ದರು. ಇಂದು ಬೆಳಗಿನ ಜಾವ ಗ್ರಾಮದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply