ವಿಜಯನಗರ – ವಿಜಯನಗರ ಜಿಲ್ಲೆ ಕೂಡ್ಲಿಗಿ ಗುತ್ತಿಗೆದಾರರಿಂದ ಕಳಪೆ ಕಾಮಗಾರಿ ಪೂರ್ಣಗೊಳ್ಳದ ಸೇತುವೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಗುಡೆಕೋಟೆ ಹೋಬಳಿಯ ರಾಮಸಾಗರ ಹಟ್ಟಿ ರಸ್ತೆಯು, ಅನೇಕ ಹಳ್ಳಿಗಳನ್ನು ಸಂಪರ್ಕಿಸುತ್ಯದೆ. ಪಕ್ಕದ ಮೊಳಕಾಲ್ಮುರು ತಾಲೂಕಿಗೆ ಹಾಗೂ ಚಿತ್ರದುರ್ಗಕ್ಕೆ ಮಾರ್ಗವಾಗಿ ಹೋಗುವ ರಸ್ತೆಗೆ ಹೊಂದಿಕೊಳ್ಳುವ ರಸ್ತೆಯೊಂದು ರಾಮಸಾಗರ ಹಟ್ಟಿ ಮುಂಭಾಗದಲ್ಲಿ,ಕೋಡಿಹಳ್ಳಿ ಎಂದೇ ಖ್ಯಾತಿಯಾದ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯು ಸುಮಾರು ತಿಂಗಳಿಂದ ನಡೆಯುತ್ತಿದೆ. ಕಾರಣ ವಾಹನಗಳು ಹಾದು ಹೋಗಲು ಕೋಡಿಹಳ್ಳಿ ರಸ್ತೆಯ ಸೇತುವೆ ದುರಸ್ತೆ ಯಲ್ಲಿರುವುದರಿಂದ, ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ ಕಾಮಗಾರಿ ನಿರ್ಮಿಸಲು ಗುಂಡುಮುನುಗು ತಿಪ್ಪೇಸ್ವಾಮಿ ಎಂಬುವ ಗುತ್ತಿಗೆದಾರನಿಗೆ ಕಾಮಗಾರಿ ನೀಡಿದ್ದು. ಈ ಕಾಮಗಾರಿಯು ಒಂದು ತಿಂಗಳಿಂದ ಕಾಮಗಾರಿ ತಟಸ್ಥವಾಗಿದೆ,

ಈ ಕಾಮಗಾರಿಯು ಸಂಪೂರ್ಣ ಕಳಪೆಯಿಂದ ಕುಡಿದು ಈಗಾಗಲೇ ಬಂದಂತ ಮಳೆಯಿಂದ, ಕೋಡಿಹಳ್ಳಿ ಸೇತುವೆಯ ಕಾಮಗಾರಿ ಕೊಚ್ಚಿಹೋಗಿದೆ.ಇದರಿಂದ ಸಾರ್ವಜನಿಕರಿಗೆ ಮತ್ತು ರೈತರಿಗೆ ನಷ್ಟವಾಗಿದೆ ಕಾರಣ ಕಾಮಗಾರಿ ಕಳೆದ ಯಾಗದಿದ್ದರೆ ಸಂಪೂರ್ಣ ಕ್ವಾಲಿಟಿ ಯಾಗಿದ್ದರೆ ಹಾಗೂ ಪೂರ್ಣಗೊಂಡಿದ್ದರೂ  ಈ ದುಸ್ಥಿತಿ ಬರುತ್ತಿರಲಿಲ್ಲ. ಆದ್ದರಿಂದ ಈ ಕಾಮಗಾರಿಯು ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಕೂಡ ಇಂತಹ ಕಾಮಗಾರಿಗಳು ಜೊತೆ ಹಾಗೂ ಗುತ್ತಿಗೆದಾರರ ಜೊತೆ ಕೈಜೋಡಿಸಿ ಗುತ್ತಿಗೆದಾರರು ನೀಡುವ ಎಂಜಲ ಹಣವನ್ನ ಪಡೆದು ಕಾಮಗಾರಿಗಳು ಕಳಪೆ ಮಟ್ಟಕ್ಕೆ ಬರಲು ಅಧಿಕಾರಿಗಳೇ ಇದಕ್ಕೆ ಕಾರಣಕರ್ತರು ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಉತ್ತಮ ಕಾಮಗಾರಿಗಳನ್ನು ನಿರ್ಮಿಸಬೇಕು.

ರೈತರಿಗೆ ಕೂಲಿಕಾರರಿಗೆ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಇದಕ್ಕೆ ವೆಚ್ಚವಾಗುವ ಹಣ ರೈತರ ಕಾರ್ಮಿಕರ ಬೆವರು ಸುರಿಸಿ ನೀಡಿದಂತಹ ವಾಗಿರುತ್ತದೆ ಎಂದು ಅಖಿಲ ಭಾರತ  ಯುವಜನ ಫೆಡರೇಶನ್ ತಾಲೂಕು ಉಪಾಧ್ಯಕ್ಷ ಗುಡೆಕೋಟೆ ಮಂಜುನಾಥ್ ಕಿಸಾನ್ ಸಭಾ ಮುಖಂಡ ಪಂಚ್ ಅಣ್ಣ ಒತ್ತಾಯಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply