ಪ್ರಾಚೀನ ಇತಿಹಾಸವನ್ನು ಹೊಂದಿದ ಈ ಭಾರತ ದೇಶವು ಅನೇಕ ಸಂಪ್ರದಾಯ ಹಾಗೂ ಪರಂಪರೆಗಳನ್ನು ಹೊಂದಿರುವುದನ್ನು ಕಾಣುತ್ತೇವೆ. ಇಲ್ಲಿ ಎಲ್ಲರಲ್ಲಿ ದೇವರನ್ನು ಕಂಡು ಆರಾಧಿಸಿ ಗೌರವಿಸುವ ಭಾವನೆಯುಳ್ಳ ಮುಗ್ದ ಭಕ್ತಿಯುಳ್ಳವರು. ಅದಕ್ಕೆಂತೆಲೇ ಬಸವಣ್ಣನವರು ಸಂಪ್ರದಾಯವನ್ನು ಪ್ರಜ್ವಲಗೊಳಿಸಲು, ಸಂಸ್ಕಾರಹೀನ ಅಥವಾ ಸಂಪ್ರದಾಯದ ಕಳೆ (ಕಸ) ಮನದಲ್ಲಿ ಬೆಳಸಿಕೊಂಡ ವ್ಯಕ್ತಿಯ ಕೊಳೆಯನ್ನು ಕಳೆಯಲು ಪ್ರಸ್ತುತ ಈ ಕೆಳಗಿನ ವಚನವನ್ನು ವ್ಯಕ್ತಗೊಳಿಸಿರಬಹುದು.
ಏನು ಬಂದಿರಿ ಹದುಳವಿದ್ದಿರೆಂದರೆ ನಿಮ್ಮ ಮೈಸಿರಿ ಹಾರಿ ಹೋಹುದೆ?
ಕುಳ್ಳಿರೆಂದರೆ ನೆಲ ಕುಳ್ಳಿಹೋಹುದೆ?
ಒಡನೆ ನುಡಿದರೆ ಶಿರ ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿದ್ದರೆ
ಕೆಡಹಿ ಮೂಗು ಕೊಯ್ಯದೆ ಬಿಡುವನೇ ಕೂಡಲಸಂಗಮದೇವ.

ಬಸವಣ್ಣನವರಕ್ಕಿ0ತಲೂ ಮೊದಲು ವೇದ-ಆಗಮಗಳಲ್ಲಿ ಈ ಸಂಪ್ರದಾಯ ಕಾಣಬಹುದು. ನಾವು ಇರುವಲ್ಲಿ ಪರಿಚಿತ ಅಥವಾ ಅಪರಿಚಿತನಾದ ವ್ಯಕ್ತಿ ಬಂದರೆ ಅವನನ್ನು ಗೌರವಿಸಿ ಸತ್ಕರಿಸಬೇಕು. ಅವನು ಅಪ್ರತ್ಯಕ್ಷವಾಗಿ ದೇವರಿರುವರೆಂಬ ಭಾವವು ನಮ್ಮಲ್ಲಿದೆ. ಅದಕ್ಕೆ ವಿರುದ್ಧವಾಗಿ ನಡೆವವರಿಗೊಂದು ಬಸವಣ್ಣನವರ ಕಿವಿ ಮಾತು. ಬನ್ನಿ, ಹೇಗಿದ್ದಿರಿ, ಎಲ್ಲಿಂದ ಬಂದಿರಿ ಚನ್ನಗಿದ್ದಿರಾ? ಎಂದರೆ ನಿಮ್ಮ ಮೈಸಿರಿ ಹಾರಿ ಹೋಗುವುದೆ? ಕುಳಿತುಕೊಳ್ಳಿರೆಂದರೆ ನೆಲಕ್ಕೆ ತೆಗ್ಗು ಬಿಳುವದೆ? ಅಪರಿಚಿನೊಂದಿಗೆ ಹೇಗೆ ಮಾತನಾಡುವುದೆಂದು ಹಿಂದೆ ಸರಿದು ಮನವಿಲ್ಲದೆ ಮಾತನಾಡಿದರೆ ಶಿರ ಹೊಟ್ಟೆ ಒಡೆಯುವುದೆ? ಅಥಿತಿಯನ್ನು ಸತ್ಕರಿಸದೆ ಹೋದರೆ ಕೂಡಲಸಂಗಮದೇವ ಕೆಡಹಿ ಮೂಗು ಕೊಯ್ಯದೆ ಬಿಡುವುದಿಲ್ಲ ಎಂದಿದ್ದಾರೆ ಬಸವಣ್ಣವರು. ಇದರ ಸಾರವು ವೇದದ ಕೋನೆಯ ಭಾಗವಾದ ಉಪನಿಷತ್ತಿನಲ್ಲಿ “ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ ದೇವೋ ಭವ, ಅಥಿತಿ ದೇವೋ ಭವ,” ಎಂಬ ಮಾತುಗಳನ್ನು ಕಾಣುತ್ತೇವೆ. ಅಂದರೆ ಮನೆಗೆ ಬಂದ ಬಂದ ಒಬ್ಬ ಅಥಿತಿಯು ದೇವರ ಸ್ವರೂಪ. ಇದಕ್ಕೆ ಉತ್ತಮ ದೃಷ್ಟಾಂತ ಇಲ್ಲಿ ಹೀಗೆ ನೋಡಬಹುದು.
ಇಂಗ್ಲAಡಿನ ಒಂದು ಸಿಟಿ ಬಸ್ಸಿನಲ್ಲಿ ನಡೆದ ಘಟನೆ. ಆ ಸಿಟಿ ಬಸ್ಸಿನಲ್ಲಿ ಚಾಲಕ ಮತ್ತು ಕಂಡೇಕ್ಟರ ಒಬ್ಬನೇ ಆಗಿದ್ದನು. ಎಲ್ಲರು ಸರಸರ ಬಸ್ಸು ಹತ್ತಿ ತಮಗೆ ಹೋಗಬೇಕಾಗ ಸ್ಥಳದ ಹೆಸರು ಹೇಳಿ ಸರಿಯಾದ ಚಿಲ್ಲರ ಹಣ ಕೊಟ್ಟು ಟಿಕೆಟ ಪಡೆಯುತಿದ್ದರು. ಅದರಲ್ಲಿ ಇಂಗ್ಲAಡಿಗೆ ಹೋದ ಒಬ್ಬ ಭಾರತೀಯನೊಬ್ಬ ಆ ಬಸ್ಸಿನಲ್ಲಿ ಪ್ರಯಾಣಿಸುತಿದ್ದ. ಟಿಕೆಟ ಪಡೆಯಲು ಚಿಲ್ಲರೆ ದುಡ್ಡು ಇಲ್ಲ. ಕಂಡೆಕ್ಟರ ಚಿಲ್ಲರ ಕೇಳಿದ. ಆದರೆ ಚಿಲ್ಲರ ಇಲ್ಲದ ಇವನನ್ನು ಹಿಂದೆ ನೂಕಿದರು. ಅಲ್ಲಿರುವ ನಾಲ್ಕು ಜನ ಭಾರತೀಯರು ಇಂತವರು ಯಾಕೆ ರ‍್ತಾತಾರೆ ಎಂದು ಗೊಣಗಿದರು. ಅವನಿಗೆ ವಯಸ್ಸಾಗಿತ್ತು ಯಾರು ಬೇಲೆ ಗೌರವ ಕೊಡಲಿಲ್ಲ. ಆದರೆ ಆ ಬಸ್ಸಿನಲ್ಲಿದ್ದ ಒಬ್ಬ ಬಾಲಕಿ ಎದ್ದು ಆ ವಯಸ್ಸಾದ ಹಿರಿಯ ವ್ಯಕ್ತಿಗೆ ಮಾತನಾಡಿಸಿ ಎಲ್ಲಿಗೆ ಹೋಗಬೇಕು ಎಂದು ಕೇಳಿ ಅವಳೆ ಚಿಲ್ಲರೆ ಕೊಟ್ಟು ಟಿಕೆಟ ತಗೆಯಿಸಿ ಕೊಟ್ಟಳು. ಆಗ ಕಂಡೆಕ್ಟರ ಕೇಳಿದ. ಅವನು ನಿನಗೆ ಪರಿಚಯವೇ? ಟಿಕೆಟ ಯಾಕೇ ತಗೆಯಿಸಿದೆಯಾ? ಎಂದು ಕೇಳಿದಾಗ ಅವರು ಭಾರತೀಯರು ಅವರಿಗೆ ಇಂಗ್ಲಿಷ ಭಾಷೆ ಅಷ್ಟು ಚನ್ನಾಗಿ ಬರಲ್ಲ. ಅವರು ನಮ್ಮ ದೇಶದ ಅಥಿತಿ. ಅವರಿಗೆ ಇಲ್ಲಿ ಗೌರವ ಸಿಗದೇ ಹೋದರೆ ನಮ್ಮ ದೇಶದ ಗೌರವ ಏನಾದಿತು? ಅವರು ಭಾರತಕ್ಕೆ ಮತ್ತೆ ಮರಳಿ ಹೋದಾಗ ಇಂಗ್ಲAಡ ಹೀಗೆ-ಹಾಗೆ ಅಂತ ಹೇಳಿದರೆ ನಾವು ಇದ್ದು ಸತಂತೆ, ಅದಕ್ಕೆ ನಾನು ಸಹಾಯ ಮಾಡಿದೆ ಎಂದಳು. ಆ ನಾಲ್ಕು ಜನ ಭಾರತೀಯರು ತಲೆ ಕೆಳಗೆ ಮಾಡಿದರು. ಎಂಬುವುದನ್ನು ಷಡಕ್ಷರಿಯವರು ಕ್ಷಣಹೊತ್ತು ಆಣಿಮುತ್ತು ಎಂಬ ಗ್ರಂಥದಲ್ಲಿ ಈ ಕಥೆ ಹೇಳಿರುವುದನ್ನು ಕಾಣಬಹುದು.
ಆದುದರಿಂದ ವ್ಯಕ್ತಿ ಯಾವನೇ ಆಗಿರಲಿ, ಯಾವ ದೇಶದವನೇ ಆಗಲಿ, ಯಾವ ಸಮಯವಾಗಲಿ ತಿಳಿದೋ ತಿಳಿಯದೆಯೋ ನಮ್ಮ ಊರಿಗೆ ಅಥವಾ ನಮ್ಮ ಮನೆಗೆ ಬಂದರೆ ಸತ್ಕರಿಸಿ ಕಳುಹಿಸಿದರೆ ಅದೊಂದು ನಮ್ಮ ಬಾಳಿಗೆ ಮುಂದಿನ ಬುತ್ತಿ ಆಗುವುದು. ಎನ್ನುವರು ಸರ್ವಜ್ಞಮೂರ್ತಿಗಳು –
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ | ಅದು ಮುಂದೆ
ಕಟ್ಟಿಹುದು ಬುತ್ತಿ ಸರ್ವಜ್ಞ ||
ಒಮ್ಮೆ ಸಂತನೊಬ್ಬ ಸಂಚರಿಸುತ್ತ ಪರ ಊರಿಗೆ ಬಂದಿದ್ದ. ತುಂಬುರಾತ್ರಿ ಆಗಿತ್ತು. ಮುಂದಿನ ಊರಿಗೂ ಹೋಗಲು ಆಗುತ್ತಿಲ್ಲ. ಇನ್ನೇನು ಮಾಡಬೇಕು? ಎಂದು ತಿಳಿದು ರಾತ್ರಿ ಇರಲು ಒಂದು ದೇವಸ್ಥಾನ ಇಲ್ಲ. ಆ ಊರಲ್ಲಿ ಪರಿಚಯವಿರುವವರು ಯಾರೂ ಸಹ ಇರಲಿಲ್ಲ. ಅಲ್ಲಿರುವ ಶ್ರೀಮಂತನ ಮನೆಗೆ ಹೋಗಿೆÆಂದು ದಿನ ತಮ್ಮ ಮನೆಯಲ್ಲಿ ಇರಲು ಅವಕಾಶ ಮಾಡಿ ಕೊಡಿ. ಬೆಳಿಗ್ಗೆ ಎದ್ದು ಕೂಡಲೇ ಹೋಗುವೆ ಎಂದು ಕೇಳಿಕೊಂಡನು. ಅದಕ್ಕೆ ಶ್ರೀಮಂತ ತನಗೆ ದೇವರು ಸಿರಿ ಸಂಪತ್ತು ಕೊಟ್ಟಿದ್ದರೂ ಆತನಿಗೆ ತಂಗಳು ಅನ್ನ ಊಟಮಾಡಲು, ಮನಗಲು ಹರಿದ ಕಂಬಳಿ ಮಲಗಿಕೊಳ್ಳಲು ಕೊಟ್ಟನು. ಅದನ್ನೇ ಆ ಸಂತ ಶಿವಾರ್ಪಣ ಎಂದು ಆತಿಥ್ಯ ಸ್ವೀಕರಿಸಿದನು. ಅಂದು ರಾತ್ರಿ ಅಲ್ಲಿದ್ದು ಬೆಳಿಗ್ಗೆ ಆ ಶ್ರೀಮಂತನಿಗೆ ಧನ್ಯವಾದ ಹೇಳಿ ಹೊರಟು ಹೋದನು.
ಕೆಲವು ದಿನಗಳ ನಂತರ ಈ ಶ್ರೀಮಂತನಿಗೆ ಆ ಸಂತನಿರುವ ಊರಿಗೆ ಕಾರ್ಯ ನಿಮಿತ್ಯ ಹೋಗಿದ್ದ ಕೊನೆಯ ರಾತ್ರಿ ಬಸ್ಸು ಕೈಕೊಟ್ಟಿತ್ತು. ಊರಿಗೆ ಹೋಗಲು ಯಾವುದೇ ವಾಹನಗಳಿಲ್ಲ. ಇನ್ನೇನು ಮಾಡಬೇಕೆಂದು ಅಲ್ಲಿರುವ ಜನರಿಗೆ ಕೇಳಿದಾಗ ಇಲ್ಲೆ ಸಮೀಪದಲ್ಲಿ ಒಂದು ಆಶ್ರಮವಿದೆ. ಅಲ್ಲಿದ್ದು ಬೆಳಿಗ್ಗೆ ತಾವು ಹೋಗಬಹುದು ಎಂದು ಉಪಾಯ ಹೇಳಿದರು. ಆಶ್ರಮಕ್ಕೆ ಬಂದು ನೋಡಲು ಹಲವಾರು ದಿನಗಳ ಹಿಂದೆ ತನ್ನ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ ಸಂತ. ಅವನನ್ನು ನೋಡಿದ ಶ್ರೀಮಂತ ಪರಿಚಯವಿರುವಂತೆ ಮಾತನಾಡಿದ. ಆಶ್ರಮದಲ್ಲಿರುವ ಭಿಕ್ಷೆಯ ಅನ್ನ ಊಟಮಾಡಲು, ಮಲಗಲು ಹರಿದ ಕಂಬಳಿ ಕೊಟ್ಟು ಸತ್ಕರಿಸಿದನು ಸಂತ. ಮನೆಯಲ್ಲಿ ಶ್ರೀಮಂತಿಕೆಯ ಸುಪತ್ತಿನಲ್ಲಿರುವ ಈ ವ್ಯಕ್ತಿಗೆ ಆಶ್ರಮದ ಅನ್ನ ಹೊಟ್ಟೆಯಲ್ಲಿ ಇಳಿಯಲಿಲ್ಲ. ಹರಿದ ಕಂಬಳಿಯಲ್ಲಿ ನಿದ್ರೆಯೂ ಬರಲಿಲ್ಲ. ಸಂತ ಬೆಳಿಗ್ಗೆ ಎದ್ದು ಶ್ರೀಮಂತನಿಗೆ ಕೇಳಿದ, ನಿದ್ರೆ ಚನ್ನಾಗಿ ಆಯ್ತಾ? ಊಟಾ ಸರಿಯಾಗಿ ಆಯ್ತಾ? ಮುಖ ಕೆಳಗೆ ಮಾಡಿದ ಶ್ರೀಮಂತ. ಹಿಂದೆ ಒಮ್ಮೆ ನಿಮ್ಮೂರಿಗೆ ಬಂದಾಗ ನೀವು ಮಾಡಿರುವ ಆತಿಥ್ಯದ ಫಲವೆಂದು ಹೇಳಿ ಮರೆಯಾದನು. ಅಲ್ಲಿ ಆಶ್ರಮವೂ ಇಲ್ಲ ಸಂತನೂ ಇಲ್ಲ. ಶ್ರೀಮಂತನ ಪರೀಕ್ಷೆಗೆ ಬಂದ ದೇವತಾ ರೂಪದ ಸಂತ ಎಂದು ಅರ್ಥೈಸಿಕೊಂಡು ಮುಂದೆ ಅತಿಥಿ ಸತ್ಕಾರವನ್ನು ಮಾಡಿ ಕೀರ್ತಿವಂತನಾದನು.
ಆದುದರಿAದ ದೇವರು ಯಾವ ರೂಪಿನಿಂದ ಬರುವನೋ ಗೊತ್ತಿಲ್ಲ. ಅವನ್ನನ್ನೂ ಗುರುತಿಸಲೂ ಆಗುವುದಿಲ್ಲ. ಆದರೆ ನಾವು ಆ ವ್ಯಕ್ತಿಯ ಹಿಂದೆ-ಮುAದು ವಿಚಾರಿಸಿ ಯೋಗ್ಯನೆಂದು ತಿಳಿದು ಅವನನ್ನು ಸತ್ಕರಿಸಿದರೆ ಅವನೇ ಮುಂದೆ ನಮ್ಮನ್ನು ಗೌರವಿಸಿ ಸತ್ಕರಿಸುವನು ಎಂಬುವುದನ್ನು ಈ ಕಥೆಯಿಂದ ಅರ್ಥೈಸಿಕೊಳ್ಳಬಹುದು.

ಡಾ. ಈಶ್ವರಾನಂದ ಸ್ವಾಮೀಜಿ
ಶ್ರೀ ಸದ್ಗುರು ಶರಣ ಶಿವಲಿಂಗೇಶ್ವರ ಮಹಾಸಂಸ್ಥಾನ ಮಠ ಟ್ರಸ್ಟ್ (ರಿ)
ಸಸ್ತಾಪೂರ ಬೀದರ ಜಿಲ್ಲೆ
ಅಧ್ಯಕ್ಷರು ಮುದನೂರು ಮಹಾಸಂಸ್ಥಾನ ಮಠ ಟ್ರಸ್ಟ್ (ರಿ)
ಮುದನೂರು ಯಾದಗಿರಿ ಜಿಲ್ಲೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply