ಬೆಂಗಳೂರು-  ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಬಾಲಿವುಡ್ ಚಿತ್ರರಂಗದಲ್ಲಿ ಎಲ್ಲಾ ದಾಖಲೆಯನ್ನು ಪುಡಿ ಮಾಡಿರು ಕೆ ಜಿ ಎಫ್ 2 ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗಿದೆ. ಕೆ ಜಿ‌ಎಫ್ 2 ಚಿತ್ರದ ಟೀಜರ್ ಬಿಡುಗಡೆ ಮಾಡಿದ್ದ ತಂಡಕ್ಕೆ ಈಗ ಸಂಕಷ್ಟ ಎದುರಾಗಿದೆ. ಕೇವಲ ಎರಡು ದಿನಗಳಲ್ಲಿ ಕೋಟ್ಯಾಂತರ ಜನರು ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿರುವ ಟೀಜರ್ ಗೆ ಈಗ ಕತ್ತರಿ ಬೀಳುವ ಸಾಧ್ಯತೆ ಇದೆ. ಟೀಜರ್ ನಲ್ಲಿ ಮೂಡಿಬಂದ ಪ್ರತಿ ಒಂದು ಫ್ರೇಮ್ ಸಹ ಅದ್ಬುತ ಎನ್ನುವಂತೆ ಚಿತ್ರಿಸಲಾಗಿದೆ. ಆದ್ರೆ  ರಾಕಿ ಬಾಯ್ ಚಿತ್ರದ ಟೀಜರ್ ಕೊನೆಯಲ್ಲಿ ರೈಫಲ್ ಮೂಲಕ ವೈರಿಗಳು ವಾಹನವನ್ನು ಊಡೀಸ್ ಮಾಡುವ ಮೂಲಕ ಹೀರೋ ಎಂಟ್ರಿ ಆಗುತ್ತೆ. ಟೀಜರ್ ಕೊನೆಯಲ್ಲಿ ಕಾದು ಬೆಂಕಿ ಆಗಿರುವ ಗನ್ ನಿಂದ ಯಶ್ ಸಿಗರೇಟ್ ಹೊತ್ತಿಸುತ್ತಾರೆ. ಆದ್ರೆ ಈ ದೃಶ್ಯಕ್ಕೆ ಈಗ ಆಕ್ಷೇಪಣೆ ಎದುರಾಗಿದೆ. ಚಿತ್ರದ ಯಾವುದೇ ದೃಶ್ಯದಲ್ಲಿ ಧೂಮಪಾನ ಮಾಡುವ ದೃಶ್ಯ ಇದ್ದಲ್ಲಿ ಅಲ್ಲಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಸೂಚನೆಯನ್ನು ಕಡ್ಡಾಯವಾಗಿ ಹಾಕಲೇಬೇಕು. ಆದ್ರೆ ಕೆ ಜಿ ಎಫ್ ಚಿತ್ರದ ಟೀಜರ್ ನಲ್ಲಿ ಆ ಸೂಚನೆ ಹಾಕಿಲ್ಲಾ ಹೀಗಾಗಿ ರಾಜ್ಯ ತಂಬಾಕು ನಿಯಂತ್ರಣ ಘಟಕ ಚಿತ್ರ ತಂಡಕ್ಕೆ ನೋಟಿಸ್ ನೋಡಿದೆ. ಹೀಗಾಗಿ ಚಿತ್ರ ತಂಡಕ್ಕೆ ಈಗ ಸಂಕಷ್ಟ ಎದುರಾಗಿದೆ.

About Author

Priya Bot

Leave A Reply