ಅಹಂಕರ

0

ಡಾ. ಈಶ್ವರಾನಂದ ಸ್ವಾಮೀಜಿ

ರೂಪ, ಯವ್ವನ, ವಿದ್ಯಾ, ಕುಲ, ಅಧಿಕಾರ, ಸ್ತ್ರಿ ಮೊದಲಾದ ಅಷ್ಟಮದಗಳಲ್ಲಿ ಐಶ್ವರ್ಯ ಒಂದು ಮದ. ಈ ಮದಗಳಲ್ಲಿ ಒಂದು ಮಾನವನಿಗೆ ಆವರಿಸಿದಾಗ ಮನುಷ್ಯ ಮನುಷ್ಯನಾಗಿ ಇರುವುದಿಲ್ಲ. ಅಹಂಕಾರ ಎಂಬ ವಿತ್ತದ ಪಿತ್ತ ತಲೆಗೇರಿ ಹುಚ್ಚನಾಗಿ ಓಡಾಡುವನು. ಈ ಹುಚ್ಚತನದಿಂದ ಬಿಡಿಸಿಕೊಳ್ಳಲು ಶರಣರ ಒಂದು ವಚನ ಅರ್ಥೈಸಿಕೊಂಡರೆ ಸಾಕು.

ಹಾವು ತಿಂದವರ ನುಡಿಸಬಹುದು,
ಗರ ಹೊಡೆದವರ ನುಡಿಸಬಹುದು,
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯ,
ಬಡತನವೆಂಬ ಮಂತ್ರವಾದಿ ಹೊಗಲು,
ಒಡನೆ ನುಡಿವರಯ್ಯ ಕೂಡಲ ಸಂಗಮದೇವ!

ಐಶ್ವರ್ಯ ಎಂಬುವುದೊಂದು ದೊಡ್ಡ ದೆವ್ವ. ಸಾಮಾನ್ಯ ದೆವ್ವ ಬಡಿದುಕೊಂಡರೆ ಯಾರು ನೀನು? ನಿನ್ನ ಹೆಸರೆನು? ಯಾಕೆ ಬಂದೆ? ನಿನ್ನ ಬಯಕೆ ಏನು? ಎಂದು ಮಾಂತ್ರಿಕನು ಜಬರಿಸಿ ಕೆಳಿದೊಡನೆ ವಿವರ ಹೇಳಿ ತನ್ನ ಬಯಕೆಗಳನ್ನು ತಿರಿಸಿಕೊಂಡು ಬಿಟ್ಟು ಹೊಗುವದು. ಆದರೆ ಐಶ್ವರ್ಯ ಎಂಬ ದೆವ್ವ ಯವ ಮಾಂತ್ರಿಕನಿಗೂ ಬಗ್ಗುವುದಿಲ್ಲ. ಸಹಜ ಸ್ಥಿತಿಗೆ ಬರುವುದು ಐಶ್ವರ್ಯ ಕೊಂಡಾಗ. ಆಗ ಎಲ್ಲಿಗೂ ತಾನೆ ಮಾತನಾಡಿಸಿ ಕುಶಲೋಪಚಾರವನ್ನು ಕೆಳುವನು.

ಒಂದು ಊರಲ್ಲಿ ಶ್ರೀಮಂತ ಹೆಣ್ಣು ಮಗಳು ಇದ್ದಳು. ಅವಳು ತಾನೆ ದೊಡ್ಡವಳೆಂಬ ಅಹಂಕರಿ. ಅವಳು ಶ್ರೀಮಂತಿಕೆಯ ಅಹಂಕರದಿಂದ ಎಲ್ಲರಿಗೂ ಹೆದರಿಸುತಿದ್ದಳು. ಆಕೆ ಆ ಏರಿಯಾದ ಅಧಿಕಾರಿಯಂತೆ ನಡೆದುಕೊಳ್ಳುತಿದ್ದಳು. ಒಂದು ದಿನ ಕೆಲಸದವಳ ಜೊತೆಗೆ ಜಗಳ ಮಾಡಿ ಖಳಿಸಿದ್ದಳು. ಅಂದು ಅಡುಗೆ ಮಾಡುವ ಕೆಲಸ ಅವಳ ಪಾಲಿಗೆ ಬಂತು. ಅವಳು ತರಕಾರಿ ಹೆರಚಿ ಅಡುಗೆ ಮಾಡುತಿದ್ದಾಗ ಅವಳ ಮೂಗಿನ ಮೇಲೆ ನೊಣವೊಂದು ಬಂದು ಕುಳಿತುಕೊಂಡಿತು. ಅದಕ್ಕೆ ಹತ್ತೆಂಟು ಸಲ ಕೈಯಿಂದ ಹೊಡೆದು ಓಡಿಸಿದಳು. ಆದರೆ ಮತ್ತೆ ಮತ್ತೆ ಆಕೆಯ ಮೂಗಿನ ಮೇಲೆ ಬಂದು ಕೂಡುತಿತ್ತು. ಅದಕ್ಕೆ ರೋಷಿ ಹೋದ ಅವಳು ಕೋಪದಿಂದ “ಈ ಏರಿಯಾದ ಬಾಸ್ ನಾನು ಇಲ್ಲಿ ಎಲ್ಲರೂ ನನಗೆ ಹೆದರುತ್ತಾರೆ. ನಾನು ಇಷ್ಟೊತ್ತು ಕೈಯಿಂದ ಹೇಳಿದೆ ಇಗ ಕೈಯಲ್ಲಿರುವ ಚಾಕುವಿನಂದ ಹೇಳುತ್ತೇನೆ. ಮೂರು ಎಣಿಸುವದರೊಳಗೆ ಎದ್ದರೆ ಸರಿ, ಇಲ್ಲವಾದರೆ ನಿನ್ನ ಪ್ರಾಣ ಹೋಯ್ತು ಅಂತ ತಿಳಿದುಕೋ” ಎಂದು ನೋಣಕ್ಕೆ ಹೇಳುವಳು. ಆಕೆ ಆಡಿದ ಮಾತು ಅದಕ್ಕೇನು ಗೋತ್ತು? ಆಕೆ ಒಂದು ಎರಡು ಅಂತ ಹೇಳುತ್ತಾಳೆ ಆ ನೋಣಕ್ಕೇನರ್ಥ ಆಗಬೇಕು? ಮೂರು ಎನ್ನುತ್ತ ಚಾಕು ಬಿಸಿದಳು ನೋಣ ಹಾರಿ ಹೋಯಿತು. ಅದರ ಜೊತೆಗೇನೆ ಅವಳ ಮೂಗು ಹೋಯಿತು. ಆದುದರಿಂದ ಅವಳು ತನ್ನ ಕೋಪ, ಅಹಂಕಾರ, ಮದದಿಂದ ಮೂಗು ಕತ್ತರಿಸಿಕೊಳ್ಳುವುದು.

ಹರಿವ ಹವಿಗಂಜೆ, ಉರಿಯ ನಲಿಗೆಗಂಜೆ,
ಸುರಗಿಯ ಮೊನೆಗಂಜೆ,
ಒಂದಕ್ಕಂಜುವೆ ಒಂದಕ್ಕಳಕುವೆ,
ಪರಸ್ತ್ರೀಯೆಂಬೀ ಜೂಬಿಗಂಜುವೆ!
ಮುನ್ನಂಜದ ರಾವಣನೇ ವಿಧಿಯಾದ.
ಅಂಜುವೆನಯ್ಯ ಕೂಡಲ ಸಂಗಮದೇವ.

ಹರಿದು ಬರುವ ಹಾವಿಗೆ, ಉರಿದು ವ್ಯಾಪಿಸಿ ಬರುವ ಅಗ್ನಿಗೆ, ಕತ್ತಿಯ ಮೊನೆಗೆ ಅಂಜುವುದಿಲ್ಲ ಶರಣರು. ಅವರಂಜುವುದು ಪರಸ್ತ್ರಿಗೆ ಮಾತ್ರ. ಅದಕ್ಕೆಂತಲೇ ಪರಸ್ತ್ರಿಯನ್ನು ಮಾಹಾದೇವಿ (ಪಾರ್ವತಿ) ಎಂದು ಕರೆದಿದ್ದಾರೆ. ಪರಸ್ತ್ರಿಯನ್ನು ಅಂಜದ ರಾವಣನು ನಾಶವಾದುದನ್ನು ಇಲ್ಲಿ ನೆನಪಿಸಿದ್ದಾರೆ ಬಸವಣ್ಣನವರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply