ಹಾವೇರಿ- ಕರೊನಾ ಮಹಾಮಾರಿ ಬಂದಾಗಿನಿಂದ ಮಕ್ಕಳ ಶೈಕ್ಷಣಿಕ ಜೀವನ ಅದೊಗತಿಗೆ ಬಂದು ತಲುಪಿದೆ. ಆದರೆ ಇದನ್ನು ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಸವಾಲಾಗಿ ಸ್ವೀಕರಿಸಿರಿಸಿದೆ. ಇದೇ ಕಾರಣಕ್ಕೆ ಹಾವೇರಿ ಜಿಲ್ಲಾಡಳಿತ ಈ ವರ್ಷ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ  ಹಾವೇರಿ ಜಿಲ್ಲೆ  ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸುವ ವಿಶ್ವಾಸವಿದೆ ಎಂದು ಜಿಲ್ಲಾ ಪಂಚಾಯತ್ CEO ಮೊಹಮ್ಮದ ರೋಶನ್ ಅವರು ಹೇಳಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಕೋವಿಡ್ ವೈರಾಣು ಹರಡುವ ಸಂದರ್ಭದಲ್ಲೂ ಮಕ್ಕಳಿಗೆ ವಿದ್ಯಾಗಮ, ಆನ್‍ಲೈನ್ ಪಾಠ, ಯೂಟ್ಯೂಬ್ ಮೂಲಕ ಕಲಿಕೆಗೆ ಆದ್ಯತೆ ನೀಡಲಾಗಿದೆ. ಆನ್‍ಲೈನ್ ಪರೀಕ್ಷೆ ನಡೆಸಲಾಗುತ್ತಿದೆ. ಇಲ್ಲಿ ಕಡಿಮೆ ಅಂಕ ಪಡೆದ ಮಕ್ಕಳಿಗೆ ವಿಷಯವಾರು ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ. ಯಾವ ತರಗತಿಯಲ್ಲಿ ಯಾವ ವಿಷಯದಲ್ಲಿ ಯಾವ ಶಾಲಾ ಮಕ್ಕಳು ಕಡಿಮೆ ಅಂಕ ಗಳಿಸಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲು ಸಾಫ್ಟವೇರ್ ಒಂದನ್ನು ಶಿಕ್ಷಕರು ಅಭಿವೃದ್ಧಿ ಪಡಿಸಿದ್ದಾರೆ. ಪ್ರತಿ ಮಗುವಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಂದೇ ವಿಷಯದಲ್ಲಿ ಒಂದೇ ಶಾಲೆಯ ಮಕ್ಕಳು ಕಡಿಮೆ ಸಾಧನೆಮಾಡಿದರೆ ಇದು ಶಿಕ್ಷಕರ ಬೋಧನೆಯ ಕೊರತೆ ಎಂದು ಭಾವಿಸಬೇಕಾಗುತ್ತದೆ. ಇಂತಹ ಶಿಕ್ಷಕರಿಗೆ ವಿಶೇಷ ತರಬೇತಿ ಆಯೋಜಿಸಲಾಗುವುದು ಹಾಗೂ ಬೋಧನಾ ಕೌಶಲ್ಯ ಸುಧಾರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Leave A Reply