ಮುಂಬೈ- ಬಾಲಿವುಡ್ ನಟ ಸೋನು ಸೂದ್ ಮತ್ತೆ ಭಾರಿ ಸುದ್ದಿಯಾಗಿದ್ದಾರೆ. ಹೌದು ಬಡವರಿಗೆ ಮಾಡುವ ಸಹಾಯದಿಂದ ಸದಾ ಸುದ್ದಿಯಲ್ಲಿರುವ ಸೋನು ಸೂದ್ ಈ ಬಾರಿ ಆಟೋ ಚಾಲಕರಿಗೆ ತಮ್ನ ಸಹಾಯ ಹಸ್ತ ಚಾಚಿದ್ದಾರೆ. ಕರೊನಾ ಮಾಹಾ ಮಾರಿ ಇಂದ ಬಡವರು ತಮ್ಮ ಕೆಲಸ ಕಳೆದುಕೊಂಡ ಜೀವನ ನಡೆಸಲು ಕಷ್ಟದ ಪರಿಸ್ಥಿತಿ ನಿರ್ಮಾನವಾಗಿದೆ. ಹೀಗಾಗಿ ಮುಂಬಯಿನ ಜನರಿಗೆ ೧೦೦ ಆಟೋಗಳನ್ನು ಖರೀದಿಸಿ ಸ್ವಾವಲಂಬಿ ಬದುಕನ್ನು ನಡೆಸುವ ಬಡವರಿಗೆ ನೀಡಿದ್ದಾರೆ.
ಇನ್ನು ಆಟೋ ಪಡೆದ ಬಡಪಾಯಿ ಯುವಕರು ಸೋನು ಸೂದ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದು. ಕರೋನಾ ಬಂದಾಗ ನಮ್ಮ ಕೆಲಸ ಹೋಗಿದೆ. ಕೆಲಸ ಇಲ್ಲದೆ ಮನೆ ಕುಟುಂಬದ ನಿರ್ವಹಣೆ ತುಂಬಾ ಕಷ್ಟ ಆಗಿದೆ. ಯಾವುದೇ ಕೆಲಸ ಮಾಡಲು ನಾವು ತಯಾರಿದ್ದೆವೆ. ಆದ್ರೆ ನಮಗೆ ಯಾರೂ ಕೆಲಸ ಕೊಟಿಲ್ಲಾ. ಆದ್ರೆ ಸೂನು ಸೂದ್ ಕೊಡಿಸಿದ ಆಟೋಗಗಳು ನಮ್ಮ ಕುಟುಂಬಕ್ಕೆ ದೊಡ್ಡ ಆಸರೆ ಆಗಲಿವೆ ಎಂದಿದ್ದಾರೆ.
ಕೇವಲ ಲಾಕ್ ಡೌನ್ ಆವಾಗಿನಿಂದ ಮಾತ್ರ ಸೋನು ಸೂದ್ ಸಹಾಯ ಮಾಡುತಿಲ್ಲಾ ಬದಲಿಗೆ ಹಲವಾರು ವರ್ಷಗಳಿಂದ ಸೂನು ಸೂದ್ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ಇನ್ನು ಕರೋನಾ ಪೀಕ್ ಟೈಮ್ ನಲ್ಲಿ ತಮ್ಮ ಸ್ವಂತ ಮನೆಯನ್ನೇ ಕರೋನಾ ರೋಗಿಗಳಿಗೆ ಬಿಟ್ಟುಕೊಟ್ಟ ಉದಾಹರಣೆ ಇದೆ. ಈ ರೀತಿಯಲ್ಲಿ ಸಮಾಜಮುಖಿ ಕೆಲಸ ಮಾಡುವ ಸೋನು ಸೂದ್ ಬಡವರ ಪಾಲೀನ ನಿಜವಾದ ಹೀರೋ ಆಗಿದ್ದಾರೆ.