ರಾಯಚೂರು – ಕೊರೊನಾ ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಎದುರಿಸುತ್ತಿರುವ ಮಂಗಳಮುಖಿಯರಿಗೆ ಕಾಂಗ್ರೆಸ್ ಮುಖಂಡೆ ಶ್ರೀದೇವಿ ನಾಯಕ ಆಹಾರ ಕಿಟ್ ವಿತರಣೆ ಮಾಡಿದ್ರು. ಅಗತ್ಯ ವಸ್ತುಗಳು ಇರುವ ೫೦ ಆಹಾರ ಕಿಟ್‌ಗಳನ್ನ ಸಿದ್ದಪಡಿಸುವ ಮೂಲಕ ೫೦ ಜನ ಮಂಗಳಮುಖಿಯವರಿಗೆ ಆಹಾರ ಕಿಟ್ ವಿತರಿಸಿದ್ರು‌. ಅಕ್ಕಿ, ಬೆಳೆ,‌ ಅಡುಗೆ ಎಣ್ಣೆ, ಸೇರಿದಂತೆ ಅಗತ್ಯ ವಸ್ತುಗಳು ‌ಕಿಟ್ ಮಾಡಿ ವಿತರಿಸಿದ್ರು. ನಿತ್ಯ ಜನರಲ್ಲಿ ಕೇಳುವ ಮೂಲಕ ಸಂಗ್ರಹವಾದ ಹಣದಿಂದ ತಮ್ಮ ಜೀವನನ್ನು ಸಾಗಿಸುತ್ತಿದ್ದರು.

ಆದ್ರೆ ಇದೀಗ ಲಾಕ್‌ಡೌನ್ ನಿಂದ ಹಣ ಸಂಗ್ರಹಕೊಳ್ಳದೆ ಜೀವನ ಸಾಗಿಸಲು ಸಂಕಷ್ಟ ಸಿಲುಕಿದ್ದಾರೆ. ಆಗ ಶ್ರೀದೇವಿನಾಯಕ ಕರೆ ಮಾಡಿ ಸಹಾಯವನ್ನ ಕೇಳಿದ್ದಾರೆ. ಇದಕ್ಕೆ ಸ್ಪಂದಿಸಿದ ೫೦ ಆಹಾರ ಕಿಟ್‌ಗಳನ್ನ ಹಂಚಿಕೆ ಮಾಡುವ ಸಂಕಷ್ಟ ಎದುರಿಸುತ್ತಿದ್ದ ಮಂಗಳಮುಖಿಯವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಳದಿಂದ ಕಠಿಣ ಲಾಕ್‌ಡೌನ್ ಮಾಡಲಾಗಿದೆ. ಇದರಿಂದ ಮಾರುಕಟ್ಟೆ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಹೀಗಾಗಿ ಅಂಗಡಿಗಳಿಗೆ, ಜನರ ಬಳಿ‌ ಹಣವನ್ನ ಕೇಳಿ, ಅವರಿಂದ ನೀಡಿದ ಹಣವನ್ನ ಕೊಡಿಸಿಕೊಂಡು‌ ತಮ್ಮ ಜೀವನೋಪಾಯ ಸಾಗಿಸುತ್ತಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply