ಆಸ್ಪತ್ರೆಯ ಆಡಳಿತ ಮಂಡಳಿಯಿಂದ  ಬಡವರಿಗೆ ಸಹಾಯ ಹಸ್ತ

0

ವಿಜಯನಗರ –  ಕರೊನಾದಂತಹ ಸಮಯದಲ್ಲಿ ಬಹಳಷ್ಟು ಜನರು ಒಂದೊಪ್ಪತ್ತಿನ ಊಟಕ್ಕೂ ಪರದಾಡೋ ಸ್ಥಿತಿ ಇದೆ. ಇಂತಹ ಸಮಯದಲ್ಲಿ ವೈದ್ಯರಾದ ಡಾ. ಯುವರಾಜ್ 150  ಬಡವರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ಇದ್ದಂತಹ ಜನರು ಸಾಕಷ್ಟಿದ್ದಾರೆ. ಇದ್ದವರು ಬಡವರಿಗೆ ಸಹಾಯ ಮಾಡಿ, ಅವರ ನೇರವಿಗೆ ಧಾವಿಸಬೇಕು ಎಂದರು. ಕೋರೋನಾ ಮಹಾಮಾರಿ ರೋಗದ ಮೋದಲನೇಯ ಅಲೇ ಹಾಗೂ ಎರಡನೇಯ ಅಲೇಗೆ ಕಡ/ಬಡವರು, ನಿರ್ಗತೀಕರ ಜೀವನ ಕಷ್ಠಕರವಾಗಿದ್ದು, ಈ ಮಾಹಾಮಾರಿ ಕೊರೋನಾ ರೋಗದ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹರಡುತ್ತಿದೆ. ಆದಕಾರಣ ಇದನ್ನು ತಡೆಗಟ್ಟಲು ಸರಕಾರದ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳು ಸೂಸುತ್ರವಾಗಿ ನಡೆಯುತ್ತಿವೆ. ಆದರೂ ಸಹ ಇದನ್ನು ತಹಬದಿಗೆ ತರುವ ಪ್ರಯತ್ನ ಕಷ್ಟಕರವಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚೆತ್ತು ಕೊಂಡು ಪ್ರತಿಯೊಬ್ಬರು ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು, ಯುವಕರು ಅನಾವಶ್ಯಕವಾಗಿ ರಸ್ತೆಗೆ ಇಳಿಯಬೇಡಿ, ಎಂದು ಹೇಳಿದರು

ಪುತ್ತೂರು ಆಸ್ಪತ್ರೆಯ ವೈದ್ಯ ಡಾ. ಯುವರಾಜ್ ಮಾತನಾಡಿ, ನಾವು ನಮ್ಮ ಸ್ನೇಹಿತರಾದ ಮಾರ್ಕಂಡಯ್ಯ ಮತ್ತು ಚೇತನ್ ಎಂಬುವವರನ್ನು ಇತ್ತೀಚಿಗೆ ಕಳೆದುಕೊಂಡಿದ್ದೇವೆ. ಅವರ ನೆನಪಿಗಾಗಿ ನಾವು ಇಂದು ಆಹಾರ ಕಿಟ್ ವಿತರಣೆ ಮಾಡುತ್ತಿದ್ದೇವೆ. ಬಡವರಿಗೆ ಸಹಾಯ ಮಾಡಲು ಒಂದು ನೆಪ ಅಷ್ಟೆ, ಬಡವರ ಹಸಿವು ನೀಗಿಸೋಕೆ ಇದೊಂದು ನೆಪ ಅಷ್ಟೆ ಇದ್ದಂತಹವರು ಬಡವರಿಗೆ ದಾನ ಮಾಡಬೇಕು ಎಂದು ಹೇಳಿದರು. ಪರಿಶಿಷ್ಟ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ವಸಂತ್, ಅಲೆಮಾರಿಗಳ ಸಂಘದ ಮುಖಂಡ ಸಣ್ಣ ಮಾರೆಪ್ಪ ಹಾಗು ರಾಜೇಶ ಪರಶುರಾಮ ಸೇರಿದಂತೆ ಇತರರು ಇದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply