ಬೆಂಗಳೂರು- ಒಂಬತ್ತು ದಿನದಲ್ಲಿ ಮೂರನೇ ಭಾರಿ ಖಾತೆಯನ್ನು ಬದಲಾವಣೆ ಮಾಡುತ್ತಿದ್ದಾರೆ. ಇದರಿಂದ ಸಚಿವರಿಗೆ ಅಸಮಾಧಾನ ಹೆಚ್ಚಾಗುತ್ತಿದೆ. ಅಸಮಾಧಾನಗೊಂಡ ಸಚಿವರ ಮನವೊಲಿಸಲು ಸಿಎಮ್ ಬಿ, ಎಸ್, ಯಡಿಯೂರಪ್ಪ ಅವರು ಹರಸಾಹಸ ಪಡುತ್ತಿದ್ದಾರೆ.  ಆದರಿಂದ ಮತ್ತೆ ಖಾತೆ ಬದಲಾಯಿಸಲು ಸಿಎಮ್ ಬಿ, ಎಸ್, ಯಡಿಯೂರಪ್ಪ ಅವರು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಚಿವ ಸುಧಾಕರ್ ಅವರಿಂದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಪಡೆದು ಸಚಿವ ಮಾಧುಸ್ವಾಮಿ ಅವರಿಗೆ ನೀಡಲಾಗಿತ್ತು. ಇದೀಗ್ ಮಾಧುಸ್ವಾಮ ಅವರಿಂದ  ವೈದ್ಯಕೀಯ ಶಿಕ್ಷಣ ಇಲಾಖೆಯನ್ನುವಾಪಸ್ ಪಡೆದು, ಪ್ರವಾಸೋಧ್ಯಮ ಇಲಾಖೆಯನ್ನು ನೀಡಲಾಗುತ್ತಿದೆ. ಇನ್ನು ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಸಚಿವ ಸುಧಾಕರ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ.

ಸಚಿವ ಆನಂದ ಸಿಂಗ್ ಅವರ ಹತ್ತಿರವಿದ್ದ ಖಾತೆಯನ್ನು ಮಾಧುಸ್ವಾಮಿ ಅವರಿಗೆ ನೀಡಲಾಗಿತ್ತು. ಮಾಧುಸ್ವಾಮಿ ಅವರಿಗೆ ನೀಡಿದ ಪ್ರವಾಸೋಧ್ಯಮ ಮತ್ತು ಪರಿಸರ ಖಾತೆಯನ್ನು ಮೇಲಿನ ಮಾತಿಗೆ ಒಪ್ಪಿಕೊಂಡರೂ, ಅವರಲ್ಲಿ ಅಸಮಾಧಾನ  ಇನ್ನೂ ಮನೆ ಮಾಡಿತ್ತು. ಇದೀಗ್ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಇನ್ನು ಸಚಿವ ಆನಂದ ಸಿಂಗ್ ಅವರು ಕೂಡಾ ಖಾತೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ವಕ್ಪ್ ಮತ್ತು ಹಜ್ ಖಾತೆಯನ್ನು ಸ್ವೀಕರಿಸುವುದ್ದಿಲ್ಲ. ಬದಲಾಗಿ ನಾನು ರಾಜೀನಾಮೆ ನೀಡುತ್ತೇನೆ. ಎಂದು ಹೇಳಿದ್ದರು. ಆದರೆ ರಾಜೀನಾಮೆಯ  ಬಗ್ಗೆ ಸಿಎಮ್  ಅವರ ಜೊತೆ ಮಾತನಾಡಿ ಅಧೀಕೃತ ಮಾಹಿತಿ ನೀಡಲಿದ್ಧಾರೆ .  ಖಾತೆಯ ಬದಲಾವಣೆಯ ಅಧೀಕೃತ ಮಾಹಿತಿ ಇಂದು ಅಥವಾ ನಾಳೆ ಹೊರಬೀಳುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

About Author

Priya Bot

Leave A Reply