ಹುಬ್ಬಳ್ಳಿ- ಬಿಜೆಪಿಯವರು ರಸ್ತೆಯಲ್ಲಿ ಹೊಡೆದಾಡಿ ಲೀಡರ್ ಆಗ್ತಾರೆ. ಆದ್ರೆ ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ಸೇರಿ ರೂಮಿನಲ್ಲಿ ಒಳಗಡೆ ಹೋದ್ರೆ ಒಬ್ಬ ಲೀಡರ್ ಹುಟ್ಟುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ ಪಕ್ಷದ ವಿರುಧ್ದ ಲೇವಡಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ. ಈ ಹಿಂದೆ ಒಂದು ಬಾರಿ ಪ್ರಿಯಾಂಕಾ ಗಾಂಧಿಗೆ ಗಂಡು ಮಗು ಹುಟ್ಟಿದಾಗ ಲೀಡರ್ ಹುಟ್ಟಿದ್ದಾನೆಂದು ಹೇಳಿ   ಕಾಂಗ್ರೆಸ್ ನವರು ಸ್ವಿಟ್ ಹಂಚಿದ್ರು, ಗಾಂಧಿ ಕುಟುಂಬವನ್ನು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಜೋಶಿ, ರಾಹುಲ್ ಗಾಂಧಿಯವರ ಜೀವನಕ್ಕೆ ಒಂದು ಪ್ಲ್ಯಾನ್ ಇಲ್ಲಾ, ಅವರು ಲಾಕ್ಡೌನ ಅನ್ ಪ್ಲ್ಯಾನ್ ಎಂದು ಟ್ವಿಟ್ ಮಾಡಿದ್ದರು, ಟ್ವಿಟ್ ಮಾಡಿ ದೇಶ ಬಿಟ್ಟು ಹೊರದೇಶಕ್ಕೆ ಓಡಿ ಹೋಗಿದ್ದರು, ಅವರ ಪೂರ್ವಜನರನ್ನ ನೋಡಲಿಕ್ಕೆ ಹೋಗಿದ್ದರು ಎಂದು ರಾಹುಲ್ ಗಾಂಧಿ ಬಗ್ಗು ಕಟುವಾಗಿ ಟೀಕಿಸಿದ್ದಾರೆ. ಇನ್ನು ಗ್ರಾಮಪಂಚಾಯತಿ ಸದ್ಸ್ಯರ ಸಮಾವೇಶದಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಕವಿಮಾತು ಹೇಳಿದ್ದು, ಗ್ರಾಮ ಪಂಚಾಯತಿ ಸದಸ್ಯರು ಸರಿಯಾಗಿ ಕೆಲಸ ಮಾಡಬೇಕು, ನೀವು ಕೆಲಸ ಮಾಡಿದ್ರೆ ಒಬ್ಬ ಗ್ರಾಮ ಪಂಚಾಯತಿ ಸದಸ್ಯ ದೇಶದ ಪ್ರಧಾನಿಯಾಗಬಹುದು. ಇದು ನಮ್ಮ ಪಕ್ಷದಲ್ಲಿ ಮಾತ್ರ ಸಾಧ್ಯ. ಆದ್ರೆ ಕಾಂಗ್ರೆಸ್ ಪಕ್ಷದಲ್ಲಿ ಮನೆಯಲ್ಲಿ ಹುಟ್ಟಿದ್ರೆ ಮಾತ್ರ ಶಾಸಕರು, ಲೋಕಸಭಾ ಸದಸ್ಯರು ಆಗ್ತಾರೆ ಎಂದಿದ್ದಾರೆ

Leave A Reply