ಲೇಖನ ಡಾ. ಈಶ್ವರಾನಂದ ಸ್ವಾಮೀಜಿ

ಉಣ್ಣಿ ಕೆಚ್ಚಲ ಹತ್ತಿ ಉಂಬುದೇ ನೊರೆವಾಲ ?
ಪುಣ್ಯ ಕ್ಷೇತ್ರದಲ್ಲಿ ಹುಟ್ಟಿ ಉಣ್ಣದವನು
ಆ ಉಣ್ಣೆಯಿಂದ ಕರಕಷ್ಟ ರಾಮನಾಥ.
ಭರತ ಖಂಡವು ಪುಣ್ಯ ಭೂಮಿಯಗಿದೆ. ಇಲ್ಲಿ ಅನೇಕ ಸಂತರು, ಶರಣರು, ದಾರ್ಶನಿಕರು ಜನಿಸಿ ಸ್ವರ್ಗವನ್ನೇ ಧರೆಗೆ ತಂದಿದ್ದಾರೆ. ಸಪ್ತಸಾಗರ, ಪರ್ವತಗಳು, ಧಾರ್ಮಿಕಕ್ಷೇತ್ರ ಮೊದಲಾದವುಗಳಿಂದ ಕಂಗೊಳಿಸುತ್ತಿದೆ. ಇಂತಹ ಪವಿತ್ರ ಭೂಮಿಯಲ್ಲಿ ಜನಿಸಿದ ಮಾನವನು ಕಣ್ಣಿನಿಂದ ಪ್ರಕೃತಿ ಸೌಂದರ್ಯ ಸವಿದು ಹೃದಯದಲ್ಲಿ ಇದಲ್ಲ ಸೃಷ್ಟಿಸಿದ ಭಗವಂತನನ್ನು ಸ್ಮರಿಸಬೇಕೆನ್ನುವುದೆ ದೇವರ ದಾಸಿಮಯ್ಯನವರ ಆಶಯ. ಆದರೆ ಕಲವರು ಆಗೊಮ್ಮೆ, ಇಗೊಮ್ಮೆ, ಮತ್ತೆ ಕೆಲವರು ಸತತವಾಗಿ ಸ್ಮರಿಸಿದರೆ ಇನ್ನೂ ಕೆಲವರು ಸ್ಮರಿಸದೆ ಇರುತ್ತಾರೆ. ಇವರನ್ನು ನೊಣ, ಉಣ್ಣೆ ಎಂದು ಕರೆದಿದ್ದಾರೆ.
ಜಗತ್ತಿನಲ್ಲಿ ಮೂರು ರೀತಿಯನೊಣವನ್ನು ಕಾಣುತ್ತೇವೆ. ಒಂದನೆಯದು ದನದ ಕೊಟ್ಟಿಯಲ್ಲಿರುವ ನೊಣ, ಎರಡನೆಯದು ಮನೆಯಲ್ಲರುವ ನೊಣ, ಮೂರನೆಯದು ಜೇನುಗೂಡಿನಲ್ಲಿರುವ ನೊಣ. ಮೊದಲನೆಯ ನೊಣ ದನದ ಕೊಟ್ಟಿಗೆಯಲ್ಲಿ ಹಸು, ಎಮ್ಮೆಗಳ ಜೊತೆಗಿದ್ದರೂ ಅವುಗಳಿಂದ ಅಮೃತ ಸದೃಶ ಹಾಲು ಸವಿಯದೆ, ರಕ್ತ ಕುಡಿಯುತ್ತಿರುತ್ತದೆ. ಎರಡನೆಯ ನೊಣ ಮನೆಯಲ್ಲದ್ದು ಒಮ್ಮೆ ಸಿಹಿ ತಿಂಡಿಗಳ ಮೇಲೆ ಇನ್ನೊಮ್ಮೆ ಹೊಲಸು ವಸ್ತುಗಳ ಮೇಲೆ ಕುಳಿತು ಎರಡನ್ನು ಆಸ್ವಾಧಿಸುತ್ತದೆ. ಮೂರನೆಯ ನೊಣವು ಎಲ್ಲಿ ಹೂವು ಅರಳಿದೆಯೋ ಎಂದು ಹುಡುಕುತ್ತ ಹೋಗಿ ಮಕರಂದ ಸವಿದು ಆನಂದದಿಂದ ಹಾಡಿತ್ತ ತನ್ನ ಗೂಡಿನತ್ತ ಬರುತ್ತದೆ.

ಹೀಗೆಯೇ ಮಾನವ ಲೋಕದಲ್ಲಿ ಮೂರು ರೀತಿಯ ಜನರನ್ನು ಕಾಣುತ್ತೇವೆ. ಪುಣ್ಯ ಕ್ಷೇತ್ರದಲ್ಲಿ ಜನಿಸಿದವರಲ್ಲಿ ಕೆಲವರು ಕ್ಷೇತ್ರದ ಮಹಿಮೆ ತಿಳಿಯದೆ ತವು-ತಮ್ಮ ಸಂಸಾರದ ಬಗ್ಗೆ ಚಿಂತಿಸುತ್ತ ಕಾಲ ಕಳೆಯುತ್ತಾರೆ. ಇವರು ಮೊದನೆಯ ನೊಣದ ಗುಂಪಿಗೆ ಸೇರಿರುತ್ತಾರೆ. ಎರಡನೆಯ ನೊಣದ ಗುಂಪಿಗೆ ಸೇರಿದವರು ಕೆಲವೊಮ್ಮ ತೀರ್ಥಕ್ಷೇತ್ರ ದರ್ಶನದಲ್ಲಿದ್ದು ಹೆಚ್ಚಿನ ಸಮಯ ಸಂಸಾರದಲ್ಲಿ ಇರುವರು. ಮೂರನೆಯ ಮತ್ತು ಕೊನೆಯ ನೊಣ ಅಪರೂಪಕ್ಕೆ ಸಿಗುವಂತೆ ಈ ಗುಂಪಿಗೆ ಸೇರಿದವರಾಗಿದ್ದಾರೆ. ಇವರು ಎಲೆ ಮರೆಯ ಕಾಯಿಯಾಗಿ ಹೂವನ್ನು ಅರಸುತ್ತ ಹೋಗುವ ಜೇನುನೊಣ(ದುಂಬಿ)ದಂತೆ ತೀರ್ಥಕ್ಷೇತ್ರ ದರ್ಶನಗೈಯುತ್ತ ಅಲ್ಲಿರುವ ಮಹಾತ್ಮರ ಜೊತೆಗೆ ಜ್ಞಾನಾಮೃತ ಸವಿದು ಆನಂದದಿಂದ ಭಗನ್ನಾಮ ಹಾಡುವರು. ಇವರಿರುವ ಸ್ಥಳವೇ ಪುಣ್ಯಕ್ಷೇತ್ರ. ಅವರನ್ನು ಒಮ್ಮೆ ಸಂದರ್ಶಿಸಿ, ಸ್ಮರಿಸಿ, ಮುಕ್ತಿ ಪಡೆಯೋಣ. ಇವರ ಸಾಲಿಗೆ ಶ್ರೀ ದೇವಲ ಮಹರ್ಷಿ, ದೇವರ ದಾಸಿಮಯ್ಯ, ಶಂಕರಾಚಾರ್ಯ, ವಿವೆಕಾನಂದ ಮೊದಲಾದವರು.

About Author

Priya Bot

Leave A Reply