ಜೈಲು ಸೇರಿದ ಹನಿಟ್ರ್ಯಾಪ್ ಲೇಡಿ ಆ್ಯಂಡ್ ಟೀಮ್

0

ಹುಬ್ಬಳ್ಳಿ

ಅದು 2017ರಲ್ಲಿಯೇ ನಡೆದ ಪ್ರಕರಣ. ಈ ಪ್ರಕರಣದ ಕಿಂಗ್ ಫಿನ್ ಅದೊಬ್ಬ ಸ್ಮಾರ್ಟ್ ಲೇಡಿ. ಆಕೆ ನೋಡೊಕೆ ತುಂಬಾ ನಾಜೂಕಾಗಿದ್ದ ಕಿಲಾಡಿ ಲೇಡಿ. ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕನಿಗೆ ಹಳ್ಳ ತೋಡಲು ಸಿದ್ಧವಾಗಿದ್ದ ಆಕೆ ಮತ್ತು ಆಕೆಯ ಟೀಮ್ ಈಗ ಜೈಲುಪಾಲಾಗಿದೆ. ಹಾಗಿದ್ದರೇ ಏನಿದು ಪ್ರಕರಣ..? ಅಲ್ಲಿ ನಡೆದಿದ್ದಾರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್…

ಹೀಗೆ ಒಂದೊಂದು ರೀತಿಯಲ್ಲಿ ಪೋಟೋಗೆ ಪೋಸ್ ಕೊಡುತ್ತಿರುವ ಈ ಯುವತಿ ಹೆಸರು ಅನಘ ವಡವಿ. ಕಾಲೇಜ್ ಒಂದಕ್ಕೆ ಹಾಡು ಹೇಳಲು ಬಂದಿದ್ದ ಆಕೆ. ಇಲ್ಲಿನ ಉಪನ್ಯಾಸಕರಿಗೆ ತುಂಬಾ ಕ್ಲೋಸ್ ಆಗಿ ಮೋಸ ಮಾಡಲು ಮುಂದಾಗಿದ್ದಳು. ಅಲ್ಲದೇ ತುಂಬಾ ಕ್ಲೋಸ್ ಆಗಿದ್ದ ಈಕೆ ಲೆಕ್ಚರ್ ಇಂದ ಸುಮಾರು ಸಾರಿ ಹಣವನ್ನು ಕಿತ್ತುಕೊಂಡಿದ್ದಳು. ಇದನ್ನು ಬಂಡವಾಳ ಮಾಡಿಕೊಂಡಿದ್ದ ಆಕೆ ದೊಡ್ಡದಾಗಿ ಸ್ಕೇಚ್ ಹಾಕಿ ಲೆಕ್ಚರ್ ಗೆ ಹಳ್ಳ ತೋಡಲು ಮುಂದಾಗಿದ್ದಳು.

ಅಲ್ಲದೇ ಇವಳಿಗೆ ಮೂರು ಯುವಕರು ಕೂಡ ಸಾಥ್ ನೀಡಿದ್ದರು‌. ಅಂದು ಪ್ಲ್ಯಾನ್ ಮಾಡಿ ಅನಘ ವಡವಿ ಲೆಕ್ಚರ್ ಅನ್ನು ಕಾರವಾರ ರಸ್ತೆಗೆ ಕರೆದುಕೊಂಡು ಹೋಗಿದ್ದರು. ಅಲ್ಲದೆ ಅತ್ಯಾಚಾರ ಮಾಡಿರುವುದಾಗಿ ಕೂಡ ಆರೋಪ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲೆಕ್ಚರ್ ಹಣ ಕೊಡದೆ ಇದ್ದಾಗ ಲೆಕ್ಚರ್ ಮೇಲೆ ಹಲ್ಲೆ ಮಾಡಿ ಹಣದೋಚಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಹಳೆಯ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ತಾನೊಂದು ಬಗೆದರೇ ದೈವವೊಂದು ಬಗೆದಿತು ಎಂಬಂತೆ 2017 ರಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣಕ್ಕೆ ಹುಬ್ಬಳ್ಳಿಯ ಐದನೇ ಜಿಲ್ಲಾ ಸತ್ರ ನ್ಯಾಯಾಲಯ ಇತ್ಯರ್ಥ ಹಾಡಿದೆ.

ಇನ್ನೂ ಹನಿಟ್ರ್ಯಾಪ್ ಪ್ರಕರಣ ವಿಚಾರಣೆ ನಡೆಸಿದ ಐದನೇ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿತರಾದ ಅನಘ ವಡವಿ, ಗಣೇಶ್ ಶೆಟ್ಟಿ, ರಮೇಶ್ ಹಜಾರೆ, ವಿನಾಯಕ ಹಜಾರೆಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಹತ್ತು ಸಾವಿರ ದಂಡ ವಿಧಿಸಿ ಆದೇಶಿಸಿದೆ. ಇನ್ನೂ ಐತಿಹಾಸಿಕ ಶಿಕ್ಷೆ ಮೂಲಕ ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್ ಗೆ ನ್ಯಾಯಾಲಯ ತೀರ್ಪನ್ನು ನೀಡಿರುವುದು ನಿಜಕ್ಕೂ ವಿಶೇಷವಾಗಿದೆ. ಹಾಡು ಹೇಳಲು ಬಂದಿರುವ ಆ ಯುವತಿ ತಾನಾಯಿತು ತನ್ನ ಕೆಲಸ ಆಯ್ತು ಅಂತ ಇದ್ದಿದ್ದರೇ ‌ಮುಗಿದೆ ಹೋಗಿತ್ತು. ಆದರೆ ಹಣದ ಆಸೆಗೆ ಬಿದ್ದ ಆಕೆ ಈಗ ಮೂವರು ಸಹಚರರೊಂದಿಗೆ ಜೈಲುಪಾಲಾಗಿದ್ದಾಳೆ.

ಒಟ್ಟಿನಲ್ಲಿ 2017ರ ನಡೆದ ಹಲ್ಲೆಯ ಪ್ರಕರಣ ಬಿಗ್ ಟ್ವಿಸ್ಟ್ ಪಡೆದುಕೊಂಡಿದ್ದು, ಲೆಕ್ಚರ್ ನ್ನು ಟಾರ್ಗೆಟ್ ಮಾಡಿದ್ದ ಆ ಲೇಡಿ ಆ್ಯಂಡ್ ಟೀಮ್ ಐಷಾರಾಮಿ ಜೀವನದ ಕನಸನ್ನು ಕಂಡಿತ್ತು. ಆದರೆ ಈಗ ಆ ಟೀಮ್ ಗೆ ಜೈಲು ಊಟವೇ ಗತಿಯಾಗಿದೆ. ಯಾರ ಜೊತೆ ಸ್ನೇಹ ಬೆಳೆಸಬೇಕಾದರೂ ಜಾಗರೂಕತೆಯಿಂದ ಇರಬೇಕು ಸ್ವಲ್ಪ ಯಾಮಾರಿದರೂ ಸಮಸ್ಯೆ ಕಟ್ಟಿಟ್ಟ ಬುತ್ತಿ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply