ಬಳ್ಳಾರಿ-ಕಂಪ್ಲಿ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಖಾಯಂ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿಯಲ್ಲಿ  ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಪುರಸಭೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೃಹಭಾಗ್ಯ ಯೋಜನೆಯ ಮಾರ್ಗಸೂಚಿಯಂತೆ ಪೌರಕಾರ್ಮಿಕರಿಗೆ ನಿವೇಶನಗಳು ಲಭ್ಯವಿರುವುದಿಲ್ಲ ಹಾಗಾಗಿ ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸುಮಾರು ಎರಡು ಎಕರೆ ಭೂಮಿಯನ್ನು ಖರೀದಿಸಬೇಕಾಗಿರುತ್ತದೆ. ಈ ವ್ಯಾಪ್ತಿಯಲ್ಲಿ ಬರುವ ಭೂ ಮಾಲಿಕರು ಭೂಮಿ ಮಾರಾಟ ಮಾಡಲು ಇಚ್ಚಿಸಿದರೆ, ತಮ್ಮ ಜಮೀನಿನ ಸಂಪೂರ್ಣ ವಿವರಗಳು, ಭೂಮಿ ನೀಡುವ ಕುರಿತು ಪ್ರಮಾಣಪತ್ರ, ಇ.ಸಿ.ಪ್ರತಿ, ಭೂಮಿಯ ಆರ್.ಟಿ.ಸಿ ಹಾಗೂ ಮಾಲಿಕತ್ವದ ದಾಖಲೆಗಳೊಂದಿಗೆ ಇನ್ನು ಹದಿನೈದು ದಿನಗಳ ಒಳಗಾಗಿ ನೈರ್ಮಲ್ಯ ಶಾಖೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Leave A Reply