ಅಷ್ಟು ಎತ್ತರದ ಮೇಲೆ ಹಿಟಾಚು ಬಂದಿದ್ದು ಹೇಗೆ, ಕೊನೆಗೂ ಸಿಕ್ಕಿದೆ ಉತ್ತರ

0

ಮಂಗಳೂರು

ಮಂಗಳೂರು ನಗರದಲ್ಲಿರೋ ಶಾಪಿಂಗ್ ಮಾಲ್ ಬಳಿ ಬಹು ಮಹಡಿ ಕಟ್ಟಡದ ಮೇಲೆ ಹಿಟಾಚಿಯೊಂದು ಕೆಲಸ ಮಾಡುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌ ಆದರೆ ಅಷ್ಟು ಎತ್ತರದ ಕಟ್ಟಡದ ಮೇಲೆ ಹಿಟಾಚಿ ಹೋಗಿದ್ದಾದರೂ ಹೇಗೆ ಎಂಬ ಬಗ್ಗೆ ವೀಡಿಯೋ ನೋಡಿದವರೆಲ್ಲರೂ ತಲೆಕೆಡಿಸಿಕೊಂಡಿದ್ದರು.

ಈಗ ಹಿಟಾಚಿ ಬಿಲ್ಡಿಂಗ್ ಹತ್ತಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಬೃಹತ್ ಪ್ರಮಾಣದ ಕ್ರೇನ್ ಮೂಲಕ ಹಿಟಾಚಿಯನ್ನು ಅಷ್ಟು ಎತ್ತರದ ಕಟ್ಟಡದ ಮೇಲೆ ಕೊಂಡೊಯ್ಯಲಾಗಿದೆ. ಕಟ್ಟಡದ ಕೆಳಭಾಗದಲ್ಲಿ ಕ್ರೇನ್ ನಿಲ್ಲಿಸಿ ನಂತರ ಕ್ರೇನ್ ನಲ್ಲಿ ಮೇಲಕ್ಕೆ ಎತ್ತಲಾಗಿದೆ. ಮೇಲೆತ್ತುವ ಕೆಲಸಕ್ಕೆ ಸ್ವಲ್ಪ ಸಮಯ ಅಷ್ಟೇ ತಗುಲಿದ್ದು ಹೀಗಾಗಿ ಹಿಟಾಚಿ ಸುಲಭವಾಗಿ ಕಟ್ಟಡದ ಮೇಲೆ ಹತ್ತಿ ಕೆಲಸ ಆರಂಭಿಸಿದೆ. ಆದರೆ ಕ್ರೇನ್ ಮೂಲಕ ಹಿಟಾಚಿಯನ್ನು ಕಟ್ಟಡದ ಮೇಲೆ ಎತ್ತುವುದನ್ನು ನೋಡಿರದವರು ಬಿಲ್ಡಿಂಗ್ ಮೇಲೆ ಹಿಟಾಚಿ ಹೇಗೆ ಹೋಯ್ತು ಅಂತಾ ವೀಡಿಯೋ ನೋಡಿ ಆಶ್ಚರ್ಯಪಟ್ಟಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply