ಬೆಂಗಳೂರು- ಪೊಗರು ಚಿತ್ರದ ವಿವಾದದ ನಡುವೆಯೂ ಭರ್ಜರಿ ಕಲೆಕ್ಷನ್‌ ಆಗಿದೆ. ಚಿತ್ರ ಬಿಡುಗಡೆಯಾದ ಕೇವಲ ಒಂದೇ ವಾರದಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ. ಇನ್ನು ಚಿತ್ರ ನಿರ್ಮಾಣಕ್ಕೆ ಸುಮಾರು ₹31 ಕೋಟಿ ಖರ್ಚು ಮಾಡಿದ್ದು,  ಮೊದಲ ವಾರದಲ್ಲೇ ಕರ್ನಾಟಕದಲ್ಲೇ ₹45 ಕೋಟಿಗೂ ಅಧಿಕ ಕಲೆಕ್ಷನ್‌ ಆಗಿದೆ. ಇನ್ನು ಚಿತ್ರದ ಗಳಿಕೆ ಕಂಡು ಚಿತ್ರ  ನಿರ್ಮಾಪಕರು ಖುಷಿಯಾಗಿದ್ದಾರೆ.  ಚಿತ್ರದ ಯಶಸ್ಸು ಕಂಡ ಹಿನ್ನಯ ನಾಳೆ ನಗರದ ವಿವಿಧ ಚಿತ್ರಮಂದಿರಗಳಿಗೆ ಬೇಟಿ ನೀಡಲಿದ್ದಾರೆ.

ಇಂದು ಸಂಭ್ರಮಾಚರಣೆ ಸುದ್ದಿಗೋಷ್ಠಿ ನಡೆಸಿದ ಅವರು, ಚಿತ್ರವನ್ನು ಜನ ಮೆಚ್ಚಿದ್ದಾರೆ. ಉತ್ತರ ಕರ್ಣಾಟಕದಲ್ಲಿ ನಮಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದೆ. ಚಿತ್ರ ನೋಡಿದ ನನ್ನ ಹೆಂಡತಿ ಸಹ ನನ್ನ ಪಾತ್ರದ ಕುರಿತು ನನಗೆ  ನೀನೆಷ್ಟು ಕ್ರೂರಿಯಾಗಿದ್ದೀಯಾ ಎಂದು ಕೇಳಿದ್ದರು. ಆದ್ರೆ  ತಂಗಿಯ ಜೊತೆಗಿನ ದೃಶ್ಯ ನೋಡಿ ಅತ್ತಿದ್ದಾರೆ ಎಂದು ದೃವ ಸರ್ಜಾ ಹೇಳಿದ್ದಾರೆ. ಇದೇ ವೇಳೆಯಲ್ಲಿ ಮಾತನಾಡಿದ ಅವರು ಚಿತ್ರದ ಕೆಲ ಸೀನ್ ಗಳನ್ನು ಇಗಾಗಲೇ ಕಟ್ ಮಾಡಲಾಗಿದೆ ನಾವು ಉದ್ದೇಶ ಪೂರ್ವಕವಾಗಿ ತೆಗೆದಿಲ್ಲಾ ಆದ್ರೆ ನಮ್ಮಿಂದ ತಪ್ಪಾಗಿದೆ. ಹೀಗಾಗಿ ನಾನು ಅವರಲ್ಲಿ ಕ್ಷಮೆ ಕೇಳುವೆ ಎಂದಿದ್ದಾರೆ. ಇನ್ನು  ಶೀಘ್ರದಲ್ಲೇ  ಪೊಗರು ಚಿತ್ರದ  ಎಡಿಟೆಡ್ ಆವೃತ್ತಿ ಬಿಡುಗಡೆ ಮಾಡಲಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply