‌ದೆಹಲಿ – ಇಂದಿನಿಂದ ಆರಂಭವಾದ ಮೂರನೇ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಲಸಿಕೆ ಪಡೆಯುವ‌ ಮೂಲಕ ಚಾಲನೆ ನೀಡಿದ್ದಾರೆ ದಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ಮೂದಿ ದೇಶದ ಹಿರಿಯ ನಾಗರಿಕೆರಿಗೆ ಲಸಿಕೆ ಪಡೆಯುವಂತೆ ಸಂದೇಶ ನೀಡಿದ್ದಾರೆ. ಲಸಿಕೆ ಪಡೆದ ಬಳಿಕ ತಮ್ಮ ಸಾಮಾಜಿಕ ಜಾಲತಾಣದ ಟ್ವಿಟರ್ ಅಕೌಂಟ್ ನಲ್ಲಿ ಲಸಿಕೆ ಪಡೆದ ಪೋಟೋ ಹಂಚಿಕೊಂಡ ಅವರು, ಏಮ್ಸ್ನಲ್ಲಿ COVID-19 ಲಸಿಕೆಯ ನನ್ನ ಮೊದಲ ಪ್ರಮಾಣವನ್ನು ತೆಗೆದುಕೊಂಡೆ. COVID-19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ತ್ವರಿತ ಸಮಯದಲ್ಲಿ ಹೇಗೆ  ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹವಾಗಿದೆ. ಲಸಿಕೆ ತೆಗೆದುಕೊಳ್ಳಲು ಅರ್ಹರಾದ ಎಲ್ಲರಿಗೂ ನಾನು ಮನವಿ ಮಾಡುತ್ತೇನೆ. ಒಟ್ಟಿನಲ್ಲಿ, ನಾವು ಭಾರತವನ್ನು COVID-19 ಅನ್ನು ಮುಕ್ತಗೊಳಿಸೋಣ ಎಂದು ಮನವಿ ಮಾಡಿದ್ದಾರೆ.

ಇಂದಿನಿಂದ ಜಗತ್ತಿನ ಅತೀ ದೊಡ್ಡ ಲಸಿಕಾ ಕಾರ್ಯಕ್ರಮಕ್ಕೆ  ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೇಶದ ಸುಮಾರು 27 ಕೋಟಿ ಜನರಿಗೆ ಲಸಿಕೆ ನೋಡುವ ಅಭಿಯಾನ ಇದಾಗಿದ್ದು, ಲಸಿಕೆ ಹಂಚಿಕೆಗೆ ಕೇಂದ್ರ ಸರ್ಕಾರ 35 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ದೇಶದ ಒಟ್ಟು 20 ಸಾವೊರ ಸರ್ಕಾರಿ ಹಾಗೂ 10 ಸಾವಿರ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಾಲಾಗಿದೆ. ಇನ್ನು 60 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಅರ್ಹರಿದ್ದು ಜನರು ಕಡ್ಡಾಯವಾಗಿ ತಮ್ನ ಯಾವುದಾದರೂ ಸರ್ಕಾರ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಇನ್ನು ಸರ್ಕಾರದ ವೆಬ್ ಸೈಟ್ ನಲ್ಲಿ ಹಾಗೂ ಕೋವಿನ್ ಆಪ್ ಮೂಲಕ ಹೆಸರನ್ನು ನೊಂದಾಯಿಸಿಕೊಂಡು ಲಸಿಕೆ ಪಡೆಯಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ಲಸಕಿ ಸಂಪೂರ್ಣವಾಗಿ ಉಚಿತವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ 25 ರೂಪಾಯಿ ನೀಡಿ ಲಸಿಕೆ ಪಡೆಯಬಹುದಾಗಿದೆ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply