ಬಳ್ಳಾರಿ- ಬ್ರಹತ್ ಪ್ರಮಾಣದ ಹೊಗೆ, ಧೂಳು, ಮಾಲಿನ್ಯವನ್ನು ಹೊರ ಬೀಡುವ ಕುರುಗೋಡು ಸಮೀಪದ ಕುಡುತಿನಿ ಪಟ್ಟಣದ  ಕಾರ್ಖಾನೆಗಳ ವಿರುದ್ದ ಪ್ರತಿಭಟನೆಯನ್ನು,ಸಂಘಟನೆಗಳು  ಪ.ಪಂ  ಅಧ್ಯಕ್ಷ ವಿ. ರಾಜಶೇಖರ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಇದಕ್ಕೆ ಊರಿನ ಜನರು, ವಿವಿಧ ಪರ ಸಂಘಟನೆಗಳು ಭಾಗಿಯಾಗಿದ್ದವು.

ಕಾರ್ಖಾನೆಗಳಿಂದ ಹೊರ ಸೂಸುವ ಹೊಗೆ , ಧೂಳು, ತ್ಯಾಜ್ಯ ಮಾಲಿನ್ಯದಿಂದ ಜನರ ಆರೋಗ್ಯಕ್ಕೆ ಮಾರಕವಾಗುತ್ತದೆ. ಇದರಿಂದ ಚಿಕ್ಕ ಮಕ್ಕಳು  ವೃದ್ದರ ಆರೋಗ್ಯಕ್ಕೆ ತುತ್ತಾಗುತ್ತಾರೆ. ವಿವಿಧ ಕಾಯಿಲೆಗಳಿಂದ ಬಳುತ್ತಾರೆ.  ಕಾರ್ಖಾನೆಗಳ ತ್ಯಾಜ್ಯ, ಜನರು ಕುಡಿಯುವ ನೀರಿನಲ್ಲಿ ವೀಲೀನವಾಗುತ್ತದೆ, ಇದರಿಂದ ಜನರಿಗೆ ಶುದ್ದ ಕುಡಿಯುವ ನೀರು  ದೊರೆಯುವುದಿಲ್ಲ. ಉತ್ತಮವಾದ ಆರೋಗ್ಯ ವಾತಾವರ ಇಲ್ಲದ್ದಿದಾಗ ಜನರ ಅರೋಗ್ಯ ಸ್ಥಿತಿ ಚಿಂತಾಜನಕವಾಗುತ್ತದೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ಸಾವು  ಉಂಟಾಗುತ್ತದೆ. ಈಗಾಗಲೇ ಇಲ್ಲಿ ಕೆಲವು ಜನರಿಗೆ  ಸಾವು ನೋವು ಉಂಟಾಗಿದೆ. ಇನ್ನು ಅದೇಷ್ಟೋ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಷ್ಟೇಲ್ಲಾ ಆದರೂ ಜಿಲ್ಲಾಡಳಿತ ಇದರ ಬಗ್ಗೆ ಯಾವುದೇ ರೀತಿಯ ನಿರ್ಣಯವನ್ನು ಕೈಗೊಂಡಿಲ್ಲ, ಕಾರ್ಖಾನೆಗಳನ್ನು ಕೇಳಿದರೆ, ನಾವು ಕಾರ್ಖಾನೆಗಳನ್ನು ಮುಚ್ಚುವುದಿ್ಲ್ಲ ಇದರ ಎಲ್ಲ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಿದ್ದೆವೆ ಎಂದು ಹೇಳುತ್ತಾರೆ, ಇದರಿಂದ  ಆಕ್ರೋಶಗೊಂಡ ಜನರು ಕಾರ್ಖಾನೆಗಳಿಗೆ ಮುತ್ತಗೆ ಹಾಕಲು ಮುಂದಾಗು್ತಾರೆ, ಇದರಿಂದ ಪರಿಸ್ಥಿತಿ ಗಂಬೀರವಾಗುತ್ತದೆ ಎಂದು ತಿಳಿದು ಪೋಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸುತ್ತಾರೆ.. ಇದರಿಂದ ರಸ್ತೆಯಲ್ಲಿ ಅಡಚನೆ ಉಂಟಾಗಿದೆ, ವಾಹನ ಸವಾರರಿಗೆ ತೊಂದರೆ ಉಂಟಾಗಿದೆ.

About Author

Priya Bot

Leave A Reply