ಕೊಪ್ಪಳ- ಕಳೆದ ನಾಲ್ಕು ವರ್ಷಗಳಿಂದ ಬರಗಾಲದಿಂದ ತಮ್ನ ಕಳೆಯನ್ನು ಕಳೆದುಕೊಂಡ ವೆಂಕಟಗಿರಿ ಕೆರೆ ಸದ್ಯ ನೀರಿನಿಂದ ಕಂಗೋಳಿಸುತ್ತಿದೆ. ಕಳೆದ ವರ್ಷದಿಂದ ಕೆರೆಯಲ್ಲಿ ನೀರು ಸ್ವಲ್ಪ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದು, ದೇಶಿಯ ಹಾಗೂ ವಿದೇಶಿ ತಳಿಯ ಪಕ್ಷಿ ಸಂಕುಲ ಕೆರೆಯ ಸುತ್ತಲಿನ ದಡದಲ್ಲಿ ಗೂಡು ಕಟ್ಟಿಕೊಂಡು ಬಿಡಾರ ಹಾಕುತ್ತಿವೆ.

ಸುಮಾರು ವರ್ಷಗಳ ಇತಿಹಾಸ ಇರುವ ಕೊಪ್ಪಳದ ಗಂಗಾವತಿ ತಾಲೂಕಿನ ವೆಂಕಟಗಿರಿ ಕೆರೆಯು ಸುಮಾರು 100 ಕ್ಕೂ ಅಧಿಕ ಎಕರೆ ವಿಸ್ತೀರ್ಣ ಹೊಂದಿದೆ. ಗ್ರಾಮದ ಹೊರ ವಲಯದಲ್ಲಿ ಕಂಡು ಬರುವ ಈ ಕೆರೆಯು ಜನನಿಬಿಡ ಪ್ರದೇಶವಾಗಿದೆ. ಇಲ್ಲಿನ ಜನರು ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ಕುಡಿಯಲು ಹೊರತು ಪಡಿಸಿ, ಜಾನುವಾರುಗಳಿಗೆ, ಜಮೀನುಗಳಿಗೆ ಸೇರಿದಂತೆ ದಿನ ನಿತ್ಯದ ಕೆಲಸಗಳಿಗೆ ನೀರು ಬಳಕೆ ಮಾಡಿಕೊಳ್ಳುತ್ತಾರೆ. ಅಂತರಜಲ ಮಟ್ಟ ಹೆಚ್ಚಿರುವುದರಿಂದ ಕಳೆದ ಒಂದು ವರ್ಷದಿಂದ ನೀರಿನ ಪ್ರಮಾಣ ಹಾಗೇ ಇದೆ. ಮುನಿರಾಬಾದ್ ಸೇರಿದಂತೆ ತುಂಗಭದ್ರ ಜಲಾಶಯದ ಹಿನ್ನಿರು ಪ್ರದೇಶದಲ್ಲಿ ಕಾಣಿಸಿ ಕೊಳ್ಳುವ ದೇಶಿಯ ಹಾಗೂ ವಿದೇಶಿ ಹಕ್ಕಿಗಳು ಆಹಾರ ಅರಸಿ ಬಂದು ಇಲ್ಲಿಯೇ ನೆಲೆ ಕಂಡು ಕಂಡುಕೊಳ್ಳುತ್ತಿವೆ. ಕೆರೆಯ ಸುತ್ತಲು ಇರುವ ಜಮೀನುಗಳಲ್ಲಿ ಭತ್ತ ಸೇರಿದಂತೆ ಜೋಳ, ರಾಗಿ, ಸಜ್ಜೆ ಹಾಗೂ ಇತರ ಬೆಳೆಗಳನ್ನು ಬೆಳೆಯಲಾಗಿದೆ. ಹಕ್ಕಿಗಳಿಗೆ ನೀರಿನಲ್ಲಿರುವ ಮೀನು, ಕ್ರೀಮಿಕೀಟ್‍ಗಳ ಜೊತೆಗೆ ಆಹಾರದ ಸೌಕರ್ಯವು ಇರುವುದರಿಂದ ಕೆರೆಯಲ್ಲಿರುವ ಕಲ್ಲು ಬಂಡೆಗಳ ನಡುವೆ, ಕೆರೆಯ ದಡದಲ್ಲಿರುವ ಜಾಲಿ ಗಿಡಗಳಲ್ಲಿ ನೂರಾರು ಹಕ್ಕಿಗಳು ಗೂಡು ನಿರ್ಮಿಸಿಕೊಂಡು ವಾಸವಾಗಿರುವುದು ವಿಶೇಷವಾಗಿದೆ.

ಬೇಟೆಗಾರರ ಭಯ – ವಿಶಾಲವಾದ ಕೆರೆಯಲ್ಲಿ ವಾಸವಾಗಿರುವ ಪಕ್ಷಿಗಳಿಗೆ ಸದ್ಯ ರಕ್ಷಣೆಯೇ ಇಲ್ಲದಂತಾಗಿದೆ. ಸಂಜೆಯಾಗುತ್ತಿದ್ದಂತೆ ಗೂಡಿನಿಂದ ಹೊರ ಬರುವ ಹಕ್ಕಿಗಳು ಕೆರೆಯ ದಡ ಸೇರಿದಂತೆ ಕೆರೆಯ ನೀರಿನಲ್ಲಿ ಗುಂಪು ಗುಂಪು ಕಾಣಿಸಿಕೊಂಡು ನೀರಿನಲ್ಲಿ ದೊರೆಯುವ ಮೀನು, ಕ್ರೀಮಿಕೀಟಗಳನ್ನು ಹುಡುಕುತ್ತವೆ. ಇದೇ ಸಮಯವನ್ನು ಬಳಸಿಕೊಳ್ಳುವ ಬೇಟೆಗಾರರು ಹಕ್ಕಿಗಳನ್ನು ಬೇಟೆ ಆಡುತ್ತಿದ್ದಾರೆ. ದಡದಲ್ಲಿ ಬಲಿಗಳನ್ನು ಹಾಕುವುದು, ಅಸ್ತ್ರಗಳನ್ನು ಬಳಸಿ ಹೊಡೆಯುವ ಮೂಲಕ ಅವುಗಳನ್ನು ಗಾಯ ಗೊಳಿಸುತ್ತಿದ್ದಾರೆ. ಹಾಗಾಗಿ ಕೆರೆಯಲ್ಲಿ ಕಾಣಿಸಿಕೊಳ್ಳುವ ವಿದೇಶಿ ಹಾಗೂ ದೇಶಿಯ ಪಕ್ಷಿಗಳಿಗೆ ರಕ್ಷಣೆ ಇಲ್ಲದಂತೆಯಾಗಿದೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply