ಹೊಸಪೇಟೆ- ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚು ಇತ್ತಂದ್ರೆ ನನ್ನ ಸಚಿವ ಸ್ಥಾನ ತ್ಯಾಗಕ್ಕೆ ನಾನು ಸಿದ್ಧ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಹೊಸಪೇಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಹೇಳಿದಂತೆ ನಾನು ಸಚಿವ ಸ್ಥಾನದ ತ್ಯಾಗಕ್ಕೆ ಸದಾ ಸಿದ್ದ ಇರುವೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ವೈ ಅವರು ಈಗಾಗಲೇ ಸರ್ಕಾರ ರಚನೆ ಮಾಡಲು ಕಾರಣಿಕರ್ತರಾದ ನಮಗೆಲ್ಲಾ ಸಚಿವ ಸ್ಥಾನ ನೀಡಿದ್ದಾರೆ . ಇನ್ಮೂಳಿದವರಿಗೂ ಸಚಿವ ಸ್ಥಾನ ನೀಡುವ ವಿಶ್ವಾಸ ಇದೆ.‌ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ . ನಮ್ಮ ವಿಜಯನಗರ ಜಿಲ್ಲೆ ರಚನೆ ವಿಚಾರದಲ್ಲಿಯೂ ಕೊಟ್ಟ ಮಾತು ಈಡೇರಿಸಿದ್ದಾರೆ. ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚು ಇತ್ತಂದ್ರೆ ನನ್ನ ಸಚಿವ ಸ್ಥಾನ ತ್ಯಾಗಕ್ಕೆ ನಾನು ಸಿದ್ಧ ಎಂದಿದ್ದೆ, ನಾನು ಈಗಲೂ ಆ ಮಾತಿಗೆ ಬದ್ಧನಾಗಿದ್ದೇನೆ ಎಂದ ಆನಂದ್ ಸಿಂಗ್ ಹೇಳಿದ್ದಾರೆ. ನನಗೆ ಜಿಲ್ಲಾ ವಿಭಜನೆ ‌ಮಾಡುವುದು ಮುಖ್ಯ ನನ್ನ ಬೇಡಿಕೆಯನ್ನು ಸಿ ಎಮ್ ಈಡೇರಿಸಿದ್ದಾರೆ. ಹೀಗಾಗಿ ಅವರು ಕೇಳಿದ್ರೆ ನಾನು ಸಚುವ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಮತ್ತೊಮ್ಮೆ ಹೇಳಿದ್ದಾರೆ….

About Author

Priya Bot

Leave A Reply