ಚಿತ್ರದುರ್ಗ- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸೀಡಿ ಪ್ರಕರಣದಲ್ಲಿ ಅಗೆದಷ್ಟು ಹೊಸ ಹೊಸ ಮಾಹಿತಿಗಳು ಸಿಗುತ್ತಿವೆ. ಸಚಿವರ ರಾಸ ಲೀಲೆ ಸಿಡಿ ಪ್ರಕರಣದ ಯುವತಿಗೆ ಮಾಜಿ ಸಚಿವರೊಬ್ಬರು ಲಕ್ಷಾಂತರ ಹಣ ಸಂದಾಯ ಮಾಡಿದ್ದಾರೆ ಎನ್ನುವ ಮಾಹಿತಿ ಈಗ ಹೊರ ಬಿದ್ದಿದೆ. ಇದರ ಬೆನ್ನಲ್ಲೇ ಚಳ್ಳಕೆರೆ ಪಟ್ಟಣದಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ನಾನು ಸಿಡಿಲೇಡಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ.

ನನಗೆ ಪ್ರತಿದಿನ ಅನೇಕ ಜನ ಕರೆ ಮಾಡುತ್ತಿರುತ್ತಾರೆ, ಹಾಗೆಂದ ಮಾತ್ರಕ್ಕೆ ನನಗೆ ಆ ಯುವತಿ ಕರೆ ಮಾಡಿದ್ದಾಳೆ ಎಂದು ಅರ್ಥ ಅಲ್ಲಾ, ಸಿಡಿ ಲೇಡಿ ಜೊತೆ ನನಗೆ ಯಾವುದೇ ಸಂಪರ್ಕ ಇಲ್ಲ, ಇಲ್ಲಿ ನನ್ನ ಹೆಸರು ಯಾಕೆ ತಳುಕು ಹಾಕಿಕೊಂಡಿದೆ ಎಂಬದು ಗೊತ್ತಿಲ್ಲ ಒಂದು ವೇಳೆ ಎಸ್ ಐಟಿ ತನಿಖೆಗೆ ಕರೆದರೆ ನಾನು ಉತ್ತರಿಸುತ್ತೇನೆ ಎಂದಿದ್ದಾರೆ. ಇನ್ನು ಈ ಹಿಂದೆಯೇ  ಸಿಡಿ ಕೇಸಲ್ಲಿ ಮಾಜಿ ಸಚಿವರೊಬ್ಬರಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು, ನನಗೆ ಭಯ ಇದ್ದರೆ ಮೊದಲೇ ಇಂಜಕ್ಷನ್ ಆರ್ಡರ್ ತೆಗೆದುಕೊಳ್ಳುತ್ತಿದ್ದೆ, ಆದ್ರೆ ಈಗ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕಿಕೊಂಡಿದ್ದು ಕೇಳಿ ಆಶ್ಚರ್ಯವಾಗಿದೆ ಎಂದಿದ್ದಾರೆ…..

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply