ಉ.ಪ್ರ- ಕೊರೊನಾದಿಂದ ಬೇಸತ್ತ ದೇಶದ ಜನರಿಗೆ ಸಂತೋಷದ ವಿಷಯ ಒಂದು ಹೊರ ಬಿದ್ದಿದೆ.  ಕೊರೊನಾ ಲಸಿಕೆಯನ್ನು ಜನರಿಗೆ ನೀಡಬೇಕೆಂದು ಸರ್ಕಾರ ಎಲ್ಲ ರಿತಿಯನ್ನು ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಇನ್ನು‌ ಈಗಾಗಲೇ ರಾಜ್ಯದಲ್ಲಿ ಇಂದು  ಲಸಿಕೆಯ ಡ್ರೈರನ್  5 ಜಿಲ್ಲೆಗಳಲ್ಲಿ ಹಂಚಿಕೆ ಕಾರ್ಯ ಸಹ ನಡೆದಿದೆ.  ಆದರೆ ಈಗ ಲಸಿಕೆ ಹಂಚಿಕೆ ವಿಚಾರದಲ್ಲಿ  ರಾಜಕೀಯ ಆರಂಭವಾಗಿದೆ.

ಬಿಜೆಪಿ ಸರ್ಕಾರದ ಲಸಿಕೆಯನ್ನು ನಾನು ತೆಗೆದುಕೊಳ್ಳುವುದ್ದಿಲ್ಲ, ನನಗೆ ಅದರ ಮೇಲೆ ನಂಬಿಕೆ ಇಲ್ಲ ಎಂದು ಉತ್ತರ ಪ್ರದೇಶದ ಮಾಜಿ ಸಿ ಎಂ ಅಖಿಲೇಶ್ ಯಾದವ್ ಅವರು ಹೇಳಿದ್ದಾರೆ. ಹೌದು ನನಗೆ ನಂಬಿಕೆ ಇಲ್ಲ ಹಾಗಾಗೀ ನಾನು ಇದನ್ನು ಸದ್ಯಕ್ಕೆ ತೆಗೆದುಕೊಳ್ಳುವುದಿಲ್ಲ. ನಮ್ಮ ಸರ್ಕಾರ ರಚನೆಯಾದಾಗಾ ನಾವು ಲಸಿಕೆನ್ನು ಉಚಿತವಾಗಿ  ಹಂಚಿಕೆ ಮಾಡುತ್ತೆವೆ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಶೃಷ್ಟಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಇಂದು 5 ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ಡ್ರೈರನ್ ನಡೆಯುತ್ತಿದೆ. ಇದು ಒಳ್ಳೇಯ ರೀತಿಯಾಗಿ ಸಾಗಿದರೆ  ಅತೀ ಬೇಗನೆ ಕೊರೊನಾ ಲಸಿಕೆ ಜನರಿಗೆ ಸುಲಭವಾಗಿ ದೊರೆಯುತ್ತದೆ.

Leave A Reply