ಕೋಲಾರ- ರಮೇಶ್ ಜಾರಕಿಹೊಳಿ ಸಿಡಿ ಯಿಂದ ಸರ್ಕಾರಕ್ಕೆ ಮುಜುಗರ ಆಗಿರೋದು ನಿಜ ಎಂದು ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆಯ ವಿಡಿಯೋದಿಂದ  ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ತಂದಿದೆ. ಆದರೆ ಇದು ರಮೇಶ್ ಜಾರಕಿಹೊಳಿ ಯನ್ನ ಮುಗಿಸೋಕೆ ಷಡ್ಯಂತ್ರ ನಡೆದಿದೆ. ‌ ಸಿಡಿಯಲ್ಲಿ ನಡೆದ ಚರ್ಚೆಯಿಂದ ಷಡ್ಯಂತ್ರ ಮಾಡಿರುವುದು ಬೆಳಕಿಗೆ ಬಂದಿದೆ. ಬಿಜೆಪಿಯ ಸಿದ್ದಾಂತ ಹಾಗೂ ಸಂಸ್ಕಾರದಿಂದ ತಕ್ಷಣ ರಾಜೀನಾಮೆ ಪಡೆದಿದ್ದೇವೆ, ಸಿಐಡಿ ಅಥವಾ ಸಿಬಿಐ ನಿಂದ ತನಿಖೆ ಆಗಬೇಕು. ಹೆಣ್ಣನ ಮುಂದೆ ಇಟ್ಕೊಂಡು ರಾಜಕಾರಣ ಮಾಡಿದ್ರೆ ಶೋಭೆ ತರೋದಿಲ್ಲ. ತನಿಖೆಯಿಂದ ಸತ್ಯ ಹೊರಗೆ ಬಂದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ನನ್ನ ಸರ್ಕಾರದ ಸದಸ್ಯನ ವಿರುದ್ಧ ಕೇಳಿ ಬಂದಿರುವ ಆರೋಪಕ್ಕಾಗಿ ನಾನು ಸಹ ವಿಡಿಯೋ ನೋಡಿದ್ದೇನೆ. ಆದರೆ ಇಲ್ಲಿ ರಾಜಕಾರಣಕ್ಕೆ ಹೆಣ್ಣಿನ ಶೋಷಣೆ ಆಗಿದೆ ಇದನ್ನು ಯಾರೂ ಸಹಿಸುವುದಿಲ್ಲ. ಪಕ್ಷಕ್ಕೆ ಚ್ಯುತಿ ಬರುವ ವಿಷಯವಿದ್ದರೆ ಹೈಕಮಾಂಡ್ ಕ್ರಮ ವಹಿಸುತ್ತೆ‌ ಎನ್ನುವ ನಂಬಿಕೆ ನನಗಿದೆ ಎಂದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply